
ನಾವು ತಿಂದ ಆಹಾರ ಜೀರ್ಣವಾಗಲು ಮೇದೋಜ್ಜೀರಕ ಗ್ರಂಥಿ ಸಹಾಯ ಮಾಡುತ್ತದೆ. ಇದು ಕಿಣ್ವಗಳನ್ನು ಸಣ್ಣಕರುಳಿನಲ್ಲಿ ಬಿಡುಗಡೆ ಮಾಡಿ ಆಹಾರವನ್ನು ಸಣ್ಣ ಕಣಗಳಾಗಿ ಮಾಡುತ್ತದೆ. ಕೆಲವೊಮ್ಮೆ ನಾವು ತಿನ್ನುವ ಆಹಾರದಿಂದ ಈ ಗ್ರಂಥಿಗೆ ಸೋಂಕು ತಗುಲಿ ಹೊಟ್ಟೆ ನೋವನ್ನು ಉಂಟುಮಾಡುತ್ತದೆ. ಈ ನೋವನ್ನು ಕಡಿಮೆ ಮಾಡಲು ಈ ಮನೆಮದ್ದನ್ನು ಬಳಸಿ.
– ಮೇದೋಜ್ಜೀರಕ ಗ್ರಂಥಿಯ ಸಮಸ್ಯೆಯಿಂದ ಹೊಟ್ಟೆ ನೋವು ಬಂದರೆ ಹೊಟ್ಟೆಯ ಮೇಲೆ ಬಿಸಿನೀರಿನ ಬಾಟಲನ್ನು 10 ನಿಮಿಷ ಇಟ್ಟುಕೊಳ್ಳಿ. ಇದರಿಂದ ಹೊಟ್ಟೆನೋವು ಕಡಿಮೆಯಾಗುತ್ತದೆ.
– ಮೇದೋಜ್ಜೀರಕ ಗ್ರಂಥಿಯಲ್ಲಿ ಉರಿಯೂತ ಕಂಡುಬಂದರೆ 1 ಕಪ್ ಬೆಚ್ಚಗಿನ ನೀರಿಗೆ 1 ಚಮಚ ಆಪಲ್ ಸೈಡರ್ ವಿನೆಗರ್ ಸೇರಿಸಿ 1 ಚಮಚ ನಿಂಬೆ ರಸ ಮತ್ತು ಜೇನುತುಪ್ಪ ಸೇರಿಸಿ ದಿನಕ್ಕೆ 2 ಬಾರಿ ಕುಡಿಯಿರಿ. ಇದರಿಂದ ನೋವು ಕಡಿಮೆಯಾಗುತ್ತದೆ.
– ಒಮೆಗಾ3 ಕೊಬ್ಬಿನಾಮ್ಲಗಳ ಸೇವನೆಯಿಂದ ಮೇದೋಜ್ಜೀರಕ ಗ್ರಂಥಿಯ ಉರಿಯೂತ ಕಡಿಮೆಯಾಗುತ್ತದೆ. ಹಾಗಾಗಿ ಸಮುದ್ರದ ಆಹಾರವನ್ನು ಹೆಚ್ಚಾಗಿ ಸೇವಿಸಿ.
-ಶುಂಠಿ ಉರಿಯೂತವನ್ನು ನಿವಾರಿಸುತ್ತದೆ. ಹಾಗಾಗಿ ಮೇದೋಜ್ಜೀರಕ ಗ್ರಂಥಿಯ ನೋವನ್ನು ಕಡಿಮೆ ಮಾಡಲು ಶುಂಠಿ ರಸ ಸೇವಿಸಿ.