ಗರ್ಭಿಣಿ ಮೇಕೆಯ ಅತ್ಯಾಚಾರ ನಡೆಸಿ ಅದರ ಸಾವಿಗೆ ಕಾರಣವಾಗಿದ್ದ ಕಾಮುಕನನ್ನು ಕೇರಳದ ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಸೆಂಥಿಲ್ ಎಂದು ಗುರುತಿಸಲಾಗಿದೆ. ತಮಿಳುನಾಡು ಮೂಲದವನಾದ ಈತ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಹೋಟೆಲ್ ಮಾಲೀಕ ನೀಡಿದ ದೂರನ್ನು ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಹೋಟೆಲ್ ಮಾಲೀಕ ನೀಡಿರುವ ಮಾಹಿತಿಯ ಪ್ರಕಾರ, ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಹೊರಗೆ ಕೇಳಿಸುತ್ತಿದ್ದ ವಿಚಿತ್ರ ಶಬ್ದವನ್ನು ಕೇಳಿ ಹೋಟೆಲ್ನ ಇತರೆ ಸಿಬ್ಬಂದಿ ಹೊರಗೆ ಬಂದಿದ್ದಾರೆ.
ಈ ವೇಳೆ ಗರ್ಭಿಣಿ ಮೇಕೆಯು ತನ್ನ ಗೂಡಿನ ಹೊರಗೆ ರಕ್ತಸ್ರಾವದಿಂದ ಬಳಲುತ್ತಿದ್ದುದು ಕಂಡಿದೆ. ಅಲ್ಲದೇ ಸ್ಥಳದಿಂದ ಸೆಂಥಿಲ್ ಓಡಿ ಹೋಗಿದ್ದನ್ನೂ ಕಂಡಿದ್ದಾರೆ. ಸೆಂಥಿಲ್ ಕಳೆದ 2 ವರ್ಷಗಳಿಂದ ಈ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ ಸೆಂಥಿಲ್ ಜೊತೆಯಲ್ಲಿ ಇನ್ನೂ ಕೆಲವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.