ಕೋಲಾರ: ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಮಾತನಾಡಿರುವ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ತಮಿಳುನಾಡು-ಕರ್ನಾಟಕ ಉಭಯ ರಾಜ್ಯಗಳ ನಡುವೆ ಹಲವು ಬಾಂಧವ್ಯಗಳಿವೆ ಎಂದು ಹೇಳಿದ್ದಾರೆ.
ಕೋಲಾರದ ಬಂಗಾರಪೇಟೆಗೆ ಆಗಮಿಸಿದ ಅಣ್ಣಾಮಲೈ, ತಮಿಳುನಾಡಿನ ಅದೆಷ್ಟೋ ಜನರು ಕರ್ನಾಟಕದಲ್ಲಿದ್ದಾರೆ. ಇಲ್ಲಿನ ಐಟಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹಲವು ಬಾಂಧವ್ಯದ ವಿಚಾರಗಳು ಎರಡೂ ರಾಜ್ಯಗಳ ನಡುವೆ ಬೆಸೆದುಕೊಂಡಿದೆ. ಮೇಕೆದಾಟು ವಿಚಾರ ಕೇಂದ್ರ ಸಚಿವರೊಬ್ಬರ ಕೈಯಲ್ಲಿದೆ. ಸುಪ್ರೀಂ ಕೋರ್ಟ್ ತೀರ್ಪಿನಂತೆ ಎಲ್ಲ ನಡೆಯಲಿದೆ ಎಂದರು.
BIG NEWS: ಪಿಎಸ್ಐ ನೇಮಕಾತಿ ಅಕ್ರಮ, ಹಾಸನದಲ್ಲಿ ತಂದೆ-ಮಗ ಸೇರಿ ಮೂವರು ವಶಕ್ಕೆ
ತಮಿಳುನಾಡು ಹಾಗೂ ಕರ್ನಾಟಕ ಮುಖ್ಯಮಂತ್ರಿಗಳು ಕೂಡ ಇದನ್ನೇ ಹೇಳಿದ್ದಾರೆ. ನಾನು ಯೋಜನೆ ಪರ ಇದ್ದೀನಾ ಅಥವಾ ವಿರುದ್ಧವಿದ್ದೇನಾ ಎಂಬುದು ಮುಖ್ಯವಲ್ಲ. ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಪ್ರಕಾರ ನಡೆಯುತ್ತದೆ ಎಂದು ಹೇಳಿದರು.