ಮೇಕಪ್ ಇಲ್ಲದೆ ಹುಡುಗಿಯರು ಮನೆಯಿಂದ ಹೊರ ಬೀಳೋದಿಲ್ಲ. ಮನೆಯಲ್ಲಿ ಕೂಡ ಮೇಕಪ್ ಮಾಡಿಕೊಂಡೇ ಇರುವವರಿದ್ದಾರೆ. ಪ್ರತಿದಿನ ಮೇಕಪ್ ಗಾಗಿ ಬ್ಯೂಟಿ ಪಾರ್ಲರ್ ಗೆ ಹೋಗಲು ಸಾಧ್ಯವಿಲ್ಲ. ಹಾಗಾಗಿ ಮನೆಯೇ ಬಹುತೇಕರಿಗೆ ಬ್ಯೂಟಿಪಾರ್ಲರ್. ಮನೆಯಲ್ಲಿಯೇ ಮಾಡಿಕೊಳ್ಳುವ ಮೇಕಪ್ ಕೆಲವೊಮ್ಮೆ ನಮ್ಮ ಸೌಂದರ್ಯವನ್ನು ಹಾಳು ಮಾಡಬಹುದು. ನಾವು ಮೇಕಪ್ ವೇಳೆ ಮಾಡುವ ಸಣ್ಣ ಸಣ್ಣ ತಪ್ಪುಗಳೇ ನಮ್ಮ ಮೇಕಪ್ ಹಾಳಾಗಲು ಕಾರಣವಾಗುತ್ತದೆ.
ಕಣ್ಣಿನ ಮೇಕಪ್ ಮಾಡಿಕೊಳ್ಳುವ ವೇಳೆ ಫೌಂಡೇಶನ್ ಅಥವಾ ಕನ್ಸೀಲರನ್ನು ಬೇಸ್ ಆಗಿ ಬಳಸಬೇಡಿ.
ಲಿಪ್ಸ್ಟಿಕ್ ಬಳಸುವ ವೇಳೆ ತುಟಿಯ ಯಾವುದಾದ್ರೂ ತುದಿಯಿಂದ ಲಿಪ್ಸ್ಟಿಕ್ ಹಚ್ಚಿಕೊಳ್ತಾರೆ. ಆದ್ರೆ ಇದು ಸರಿಯಾದ ವಿಧಾನವಲ್ಲ. ಮೇಲಿನ ತುಟಿಯ ಮಧ್ಯಭಾಗದಿಂದ ಲಿಪ್ಸ್ಟಿಕ್ ಹಚ್ಚಿಕೊಂಡ್ರೆ ತುಟಿಗಳು ಸುಂದರವಾಗಿ ಕಾಣುತ್ತವೆ. ಲಿಪ್ಸ್ಟಿಕ್ ಹಚ್ಚಿಕೊಳ್ಳುವ ಮೊದಲು ಲಿಪ್ ಬಾಮ್ ಬಳಸಿದ್ರೆ ತುಂಬಾ ಸಮಯ ಲಿಪ್ಸ್ಟಿಕ್ ಇರುತ್ತದೆ.
ಫೌಂಡೇಶನ್ ಹಚ್ಚುವ ವೇಳೆಯೂ ಕೆಲವೊಂದು ವಿಷ್ಯಗಳ ಬಗ್ಗೆ ಗಮನ ನೀಡಬೇಕಾಗುತ್ತದೆ. ಮುಖದ ತುದಿ ಅಥವಾ ಅಂಚಿಗೆ ಹಚ್ಚುವಾಗ ಕೈ ಬೆರಳುಗಳನ್ನು ಬಳಸಬೇಕು. ಇಡೀ ಮುಖಕ್ಕೆ ಫೌಂಡೇಶನ್ ಹಚ್ಚುವುದಾದ್ರೆ ಬ್ರೆಷ್ ಬಳಸುವುದು ಒಳ್ಳೆಯದು.
ಲಿಕ್ವಿಡ್ ಲೈನರ್ ಬಳಸುವ ಮೊದಲು ಪೆನ್ಸಿಲ್ ಲೈನರ್ ನಿಂದ ಮೊದಲು ಲೈನ್ ಹಾಕಿಕೊಳ್ಳಿ. ಅದ್ರ ಮೇಲೆ ಲಿಕ್ವಿಡ್ ಲೈನರ್ ಬಳಸಿ. ಆಗ ಲಿಕ್ವಿಡ್ ಲೈನರ್ ಅಲ್ಲಿ ಇಲ್ಲಿ ಹರಡುವುದಿಲ್ಲ.