ಮೇಕಪ್ ಮಾಡುವುದು ಎಲ್ಲರಿಗೂ ಇಷ್ಟವೇ. ಆದರೆ ಅದನ್ನು ಮಾಡಿಕೊಳ್ಳುವಾಗ ಕಡ್ಡಾಯವಾಗಿ ಅನುಸರಿಸಬೇಕಾದ ಕೆಲವು ಕ್ರಮಗಳನ್ನು ಬಹುತೇಕರು ಮರೆತೇ ಬಿಡುತ್ತಾರೆ. ಅವುಗಳನ್ನು ಇಲ್ಲಿ ತಿಳಿಯೋಣ…
ಮೇಕಪ್ ಮಾಡುವ ಮುನ್ನ ಫೌಂಡೇಷನ್ ಕ್ರೀಮ್ ಬಳಸುವುದರಿಂದ ಮುಖದ ರಂಧ್ರಗಳನ್ನು ಮುಚ್ಚಬಹುದು. ಮೊಡವೆ ಕಪ್ಪು ಕಲೆಗಳನ್ನು ಮರೆ ಮಾಚಬಹುದು.
ಮೇಕಪ್ ಮಾಡುವ ಮುನ್ನ ಮೊದಲ ಬಾರಿಗೆ ತ್ವಚೆಯನ್ನು ಹಾಲು ಅಥವಾ ಗುಲಾಬಿ ನೀರಿನ ನೆರವಿನಿಂದ ಸ್ವಚ್ಛಗೊಳಿಸಿ. ಮುಖದಲ್ಲಿ ಇರುವ ಕೊಳಕು ಜಿಡ್ಡು ಇದರಿಂದ ದೂರವಾಗುತ್ತದೆ.
ತ್ವಚೆಗೆ ತೇವಾಂಶ ನೀಡಲು ಉತ್ತಮ ಮಾಯಿಸ್ಚರೈಸಿಂಗ್ ಕ್ರೀಮ್ ಬಳಸಿ. ನಿಮ್ಮ ತ್ವಚೆಗೆ ಹೊಂದುವ ಫೌಂಡೇಶನ್ ಬಳಸಿ. ಇದನ್ನು ಬ್ರಶ್ ಮೂಲಕ ಲೇಪಿಸಿ. ಇದರಿಂದ ಸುಲಭವಾಗಿ ಮುಖದ ರಂಧ್ರಗಳು ಮತ್ತು ಕಲೆಯನ್ನು ಮರೆಮಾಚಬಹುದು.