‘ನನ್ನ ಮೆಸೇಜ್ ಗೆ ಉತ್ತರ ನೀಡಿಲ್ಲ ಮಗಾ ಅವಳು. ಯಾಕೆ ಅನ್ನೋದೆ ಗೊತ್ತಾಗ್ತಾ ಇಲ್ಲ’ ಸಾಮಾನ್ಯವಾಗಿ ವಿಶ್ವದಲ್ಲಿ ಎಲ್ಲ ಹುಡುಗರನ್ನು ಕಾಡುವ ಗೊಂದಲ ಇದು.
ತಾನು ಕಳುಹಿಸಿದ ಮೆಸೇಜ್ ಗೆ ಹುಡುಗಿ ಪ್ರತಿಕ್ರಿಯೆ ನೀಡಿಲ್ಲ ಅಂದ್ರೆ ಹುಡುಗರನ್ನು ಅನೇಕ ಪ್ರಶ್ನೆಗಳು ಕಾಡುತ್ವೆ.
ಹುಡುಗಿಯರು ಸಾಮಾನ್ಯವಾಗಿ ಎಲ್ಲ ಮೆಸೇಜ್ ಗಳಿಗೂ ಎಲ್ಲರ ಮೆಸೇಜ್ ಗಳಿಗೂ ಉತ್ತರ ನೀಡುವುದಿಲ್ಲ. ಇದಕ್ಕೆ ಅವರದೇ ಆದ ಕೆಲವೊಂದು ಕಾರಣಗಳಿವೆ.
ಅಪರಿಚಿತರಿಂದ ದೂರ
ಹುಡುಗಿಯರು ಅಪರಿಚಿತರ ಮೆಸೇಜ್ ಗಳಿಗೆ ಉತ್ತರ ನೀಡುವ ಪ್ರಯತ್ನಕ್ಕೆ ಹೋಗುವುದಿಲ್ಲ. ಪರಿಚಯವಿಲ್ಲ ಎಂದಾದ್ರೆ ಅವರು ಸುಮ್ಮನಿದ್ದು ಬಿಡ್ತಾರೆ. ಮೊದಲು ಹುಡುಗರು ಮಾಡಬೇಕಾದ ಕೆಲಸ ಅವರ ಪರಿಚಯ ಮಾಡಿಕೊಳ್ಳುವುದು. ಅವರ ಸ್ನೇಹ ಬೆಳೆಸುವುದು. ನಂತರ ನಂಬರ್ ವಿನಿಮಯ ಮಾಡಿಕೊಳ್ಳಬೇಕು.
ಬಾಯ್ ಫ್ರೆಂಡ್
ಈಗಾಗಲೇ ಬಾಯ್ ಫ್ರೆಂಡ್ ಹೊಂದಿರುವ ಹುಡುಗಿಯರು ಮತ್ತೊಬ್ಬ ಹುಡುಗನ ಮೆಸೇಜ್ ಗೆ ಉತ್ತರ ನೀಡದಿರುವುದೇ ಉತ್ತಮ ಎಂದು ಭಾವಿಸುತ್ತಾರೆ. ಒಂದೇ ಬಾರಿ ಎರಡೆರಡು ಹುಡುಗರನ್ನು ಮೆಂಟೇನ್ ಮಾಡುವ ಹುಡುಗಿಯರ ಸಂಖ್ಯೆ ಸ್ವಲ್ಪ ಕಡಿಮೆ. ಹಾಗಾಗಿ ಒಬ್ಬ ಹುಡುಗನ ಜೊತೆ ಚೆನ್ನಾಗಿರುವ ಕಾರಣಕ್ಕೆ ಇನ್ನೊಬ್ಬನಿಂದ ದೂರ ಇರಲು ಬಯಸಿ ನಿಮ್ಮ ಮೊದಲ ಮೆಸೇಜ್ ಗೆ ಉತ್ತರ ನೀಡುವುದಿಲ್ಲ.
ಕೋಪ ಬಂದಲ್ಲಿ
ನಿಮ್ಮ ಯಾವುದೋ ಮಾತು ಅಥವಾ ಯಾವುದೋ ನಡವಳಿಕೆ ಆಕೆಗೆ ಬೇಸರ ತರಿಸಿದ್ದರೆ ಆಕೆ ಕೋಪವನ್ನು ಮೆಸೇಜ್ ಮೂಲಕ ತೋರಿಸುತ್ತಾಳೆ. ನಿಮ್ಮ ಮೆಸೇಜ್ ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಹಾಗಾಗಿ ಮೊದಲು ಆಕೆಯನ್ನು ಭೇಟಿ ಮಾಡಿ, ಸಮಸ್ಯೆ ಬಗೆಹರಿಸಿಕೊಳ್ಳಿ.
ನಿಮ್ಮ ಸ್ಪೀಡ್
ಹುಡುಗಿಯರು ಯಾವಾಗಲು ನಿಧಾನವಾಗಿ ಯೋಚಿಸಿ ಹೆಜ್ಜೆ ಇಡುತ್ತಾರೆ. ಒಬ್ಬರ ಜೊತೆ ಸ್ನೇಹ ಬೆಳೆಸಿ, ಅವರ ಜೊತೆ ಸಂಬಂಧ ಬೆಳೆಸಿ ಮುಂದುವರೆಯಲು ಅವರಿಗೆ ಸಮಯ ಬೇಕು. ಹುಡುಗರು ಎಲ್ಲ ವಿಚಾರದಲ್ಲೂ ಆತುರ ಪಡುತ್ತಿದ್ದರೆ ಅದರಿಂದ ಹೆದರಿ ಹುಡುಗಿಯರು ನಿಮ್ಮಿಂದ ದೂರ ಇರಲು ಬಯಸುತ್ತಾರೆ.
ಒಂದು ಬ್ರೇಕ್
ಸಂಬಂಧ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಇದೆ. ಹಾಗಾಗಿ ಹುಡುಗಿಯರು ಬ್ರೇಕ್ ಬಯಸುತ್ತಾರೆ. ಸಂಬಂಧ ಯಾವ ದಿಕ್ಕಿನಲ್ಲಿದೆ ಎಂಬುದನ್ನು ತಿಳಿದುಕೊಳ್ಳಲು ಅವರು ಪ್ರಯತ್ನಿಸುತ್ತಿರುತ್ತಾರೆ.