ನಮ್ಮ ಮೆದುಳು ಹೇಗೆ ನೇವಿಗೇಷನ್ ಮಾಡುತ್ತಾ ಬೇರೆ ಬೇರೆ ಜಾಗಗಳು ಹಾಗೂ ಮಾರ್ಗಗಳನ್ನು ಪತ್ತೆ ಮಾಡುತ್ತದೆ ಎಂದು ಇದೇ ಮೊದಲ ಬಾರಿಗೆ ವಿಜ್ಞಾನಿಗಳು ದಾಖಲಿಸಿಕೊಂಡಿದ್ದಾರೆ.
ನಮ್ಮ ಸ್ಥಾನಕ್ಕೆ ಸಂಬಂಧಿಸಿದಂತೆ ಇತರ ಜನರು ಇರುವ ಜಾಗಗಳನ್ನು ಗುರುತು ಪತ್ತೆ ಮಾಡಲು ನಮ್ಮ ಮೆದುಳು ವಿಶೇಷವಾದ ಕೋಡ್‌ಗಳನ್ನು ಸೃಷ್ಟಿಸುತ್ತದೆ ಎಂದು ತಿಳಿದು ಬಂದಿದೆ. ಎಪ್ಲೆಪ್ಸಿ ರೋಗಿಗಳ ಮೇಲೆ ನಡೆಸಲಾದ ಪರೀಕ್ಷೆಯಲ್ಲಿ ಈ ವಿಚಾರ ತಿಳಿದು ಬಂದಿದೆ.
’ನೇಚರ್’ ಹೆಸರಿನ ಜರ್ನಲ್‌ನಲ್ಲಿ ಪ್ರಕಟವಾದ ಲೇಖನವೊಂದರಲ್ಲಿ, ಪ್ರತಿಯೊಬ್ಬರ ಮೆದುಳುಗಳೂ ಸಹ ವಿಶಿಷ್ಟವಾದ ಪ್ಯಾಟರ್ನ್ ಅನ್ನು ಹಿಂಬಾಲಿಸಿದ್ದು, ಗೋಡೆಗಳು ಹಾಗೂ ಇತರ ಸೀಮೆಗಳ ನಕ್ಷೆಯನ್ನು ರಚಿಸಿಕೊಳ್ಳುತ್ತವೆ ಎಂದು ವಿಜ್ಞಾನಿಗಳು ವರದಿ ಮಾಡಿದ್ದಾರೆ.
ಪರೀಕ್ಷೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರೂ ಒಂದು ಮೂಲೆಯಲ್ಲಿ ಕುಳಿತಾಗ ಒಬ್ಬೊಬ್ಬರ ಮೆದುಳೂ ಸಹ ಒಂದೇ ತೆರನಾಗಿ ಕೆಲಸ ಮಾಡುತ್ತಿರುವುದು ಕಂಡು ಬಂದಿದೆ. ಮೆದುಳಿನಲ್ಲಿ ಮೂಡುವ ವಿಶಿಷ್ಟವಾದ ಅಲೆಗಳ ಮೂಲಕ ಇತರ ಜನರ ಚಲನೆಗಳನ್ನು ಟ್ರಾಕ್ ಮಾಡಲು ಸಾಧ್ಯವಾಗಿದೆ ಎಂದು ತಿಳಿದು ಬಂದಿದೆ.