ಸಾಮಾನ್ಯವಾಗಿ ಮಹಿಳೆಯರು ಮನೆಯಲ್ಲಿ ಮೆಣಸಿನಕಾಯಿ ಉಪ್ಪಿನಕಾಯಿ ತಯಾರಿಸಿದರೆ ಅದು ಬೇಗನೆ ಹಾಳಾಗುತ್ತದೆ. ಹಾಗೇ ಮಾರುಕಟ್ಟೆಯಲ್ಲಿ ಸಿಗುವಂತಹ ಉಪ್ಪಿನ ಕಾಯಿಯಷ್ಟು ರುಚಿಯಾಗಿರುವುದಿಲ್ಲ ಎಂಬ ದೂರು ಕೇಳಿಬರುತ್ತದೆ. ನಿಮಗೂ ಇದೇ ರೀತಿಯ ಸಮಸ್ಯೆ ಕಾಡಿದ್ದರೆ ಮೆಣಸಿನಕಾಯಿ ಉಪ್ಪಿನಕಾಯಿ ತಯಾರಿಸುವಾಗ ಈ ಸಲಹೆ ಪಾಲಿಸಿ.
ಮೆಣಸಿನ ಕಾಯಿ ಉಪ್ಪಿನಕಾಯಿ ಮಾಡುವ ಮೊದಲು ಮೆಣಸಿನಕಾಯಿಯನ್ನು ಚೆನ್ನಾಗಿ ತೊಳೆದು ನಂತರ ಒರೆಸಿಕೊಳ್ಳಬೇಕು. ಇಲ್ಲವಾದರೆ ಮೆಣಸಿನಕಾಯಿಯಲ್ಲಿ ನೀರಿದ್ದರೆ ಉಪ್ಪಿನಕಾಯಿ ಹಾಳಾಗುತ್ತದೆ.
ಮೆಣಸಿನ ಕಾಯಿ ಉಪ್ಪಿನಕಾಯಿ ರುಚಿಯನ್ನು ಪಡೆಯಲು ನೀವು ಸ್ವಲ್ಪ ಸಮಯ ಕಾಯಬೇಕು. ಮೆಣಸಿನಕಾಯಿ ಉಪ್ಪಿನಕಾಯಿ ತಯಾರಿಸಿದರೆ ಅದನ್ನು ಸೇವಿಸಲು 6-7 ಗಂಟೆ ಕಾಯಬೇಕು, ತಕ್ಷಣ ಸೇವಿಸಿದರೆ ಅದು ರುಚಿಯಾಗಿರುವುದಿಲ್ಲ.
ನೀವು ಮೆಣಸಿನಕಾಯಿ ಉಪ್ಪಿನಕಾಯಿ ಮಾಡುವಾಗ ಪ್ಯಾನ್ ನಲ್ಲಿ ಮೆಣಸಿನಕಾಯಿಯನ್ನು ಹಾಕುವ ಮೊದಲು ಬಾಣಲೆ ಬಿಸಿ ಇರಬಾರದು. ಇದರಿಂದ ಮೆಣಸಿನಕಾಯಿ ಮೃದುವಾಗಿ ರುಚಿಯನ್ನು ಕಳೆದುಕೊಳ್ಳುತ್ತದೆ.