ಮೆಣಸು ಮಸಾಲೆಯುಕ್ತ ಆಹಾರದ ರುಚಿಯನ್ನ ಹೆಚ್ಚಿಸೋದ್ರ ಜೊತೆಗೆ ಆರೋಗ್ಯದ ವೃದ್ಧಿಗೂ ತುಂಬಾನೇ ಉಪಕಾರಿ.
ಅಧ್ಯಯನದ ಪ್ರಕಾರ, ವಾರದಲ್ಲಿ ನಾಲ್ಕು ದಿನಗಳ ಕಾಲ ಮೆಣಸನ್ನ ಸೇವಿಸೋದ್ರಿಂದ ಹೃದಯ ಹಾಗೂ ಮೆದುಳಿಗೆ ಸಂಬಂಧಿ ಕಾಯಿಲೆಯಿಂದ ದೂರ ಇರಬಹುದಾಗಿದೆ.
ಅಲ್ಲದೇ ಹೃದಯ ಸಂಬಂಧಿ ಕಾಯಿಲೆಯಿಂದ ಮೃತರಾಗುವವರ ಪ್ರಮಾಣವನ್ನೂ ಕಡಿಮೆ ಮಾಡಲಿದೆ.
ನೀವು ಮೆಣಸು ಅಥವಾ ಮಸಾಲೆ ಪದಾರ್ಥವನ್ನ ಇಷ್ಟ ಪಡೋದಿಲ್ಲ ಅಂದ್ರೆ ಇನ್ಮುಂದೆ ಈ ಹೊಸ ಅಭ್ಯಾಸವನ್ನ ರೂಢಿಸಿಕೊಳ್ಳೋದು ಒಳ್ಳೇದು.
ಇಟಲಿಯಲ್ಲಿ ನಡೆಸಲಾಗಿದ್ದ ಸಮೀಕ್ಷೆಯಲ್ಲಿ, 22 ಸಾವಿರ ಜನರ ಮೇಲೆ ಈ ಅಧ್ಯಯನವನ್ನ ನಡೆಸಲಾಗಿತ್ತು. ಇದರಲ್ಲಿ ಮೆಣಸು ಸೇವನೆಯಿಂದ ಹೃದಯಾಘಾತದ ಪ್ರಮಾಣ 40 ಪ್ರತಿಶತದಷ್ಟು ಕಡಿಮೆಯಾಗಿದೆ.
ಆದರೆ ಭಾರತದಲ್ಲಿ ಮಸಾಲೆಯುಕ್ತ ಪದಾರ್ಥಕ್ಕೆ ಹೆಚ್ಚು ಆದ್ಯತೆ ನೀಡೋದ್ರಿಂದ ಸಾಮಾನ್ಯವಾಗಿ ನಮ್ಮ ದೇಹಕ್ಕೆ ಮೆಣಸಿನ ಪೋಷಕಾಂಶಗಳು ಹೋಗುತ್ತದೆ. ಹಾಗಾಗಿ ಇದರ ಸೇವನೆ ಅಷ್ಟು ಅವಶ್ಯಕತೆ ಇಲ್ಲ.