ಕೆಂಪು ಮೆಣಸಿನಕಾಯಿ ಹಾಗೂ ಅದರ ಬೀಜವನ್ನು ತಿನ್ನುವುದರಿಂದ ಹೃದಯಾಘಾತ ಹಾಗೂ ಸ್ಟ್ರೋಕ್ ನಂಥ ರೋಗಗಳ ರಿಸ್ಕ್ ತಪ್ಪಿಸಬಹುದಾಗಿದೆ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.
ಇಟಲಿಯಲ್ಲಿ ನಡೆಸಲಾದ ಈ ಅಧ್ಯಯನದಲ್ಲಿ 23,000 ಮಂದಿ ಭಾಗವಹಿಸಿದ್ದರು. ಎಂಟು ವರ್ಷಗಳ ಕಾಲ ಇವರ ಆಹಾರಾಭ್ಯಾಸದ ಮೇಲೆ ಗಮನ ಇಡಲಾಗಿತ್ತು ವಾರದಲ್ಲಿ ಕನಿಷ್ಠ ನಾಲ್ಕು ದಿನ ಮೆಣಸಿನಕಾಯಿ ತಿನ್ನುವವರಲ್ಲಿ ಹೃದಯಾಘಾತದ ಸಾಧ್ಯತೆ 40%ನಷ್ಟು ಕ್ಷೀಣಿಸಿದೆ ಎಂದು ತಿಳಿದುಬಂದಿದೆ.
ಈ ಅಧ್ಯಯನವು ಇಟಲಿ ಹಾಗೂ ಮೆಡಿಟರೇನಿಯನ್ ಆಹಾರ ಪದ್ಧತಿಗೆ ಸಂಬಂಧಿಸಿದ್ದಾಗಿದೆ.