ಶುಭ ಕಾರ್ಯಕ್ಕೆ ಹೋಗುವಾಗ ಬೆಕ್ಕು ಅಡ್ಡದಾಟಿದ್ರೆ, ಅದನ್ನ ಅಶುಭ ಅಂತ ಹೇಳಲಾಗುತ್ತೆ. ಅದೇ ಬೆಕ್ಕು ಮನೆಯಲ್ಲಿ ಇದ್ದರೆ, ಏನೋ ಒಂಥಾರಾ ಖುಷಿ. ನೋಡುವುದಕ್ಕೆ ಮುದ್ದು ಮುದ್ದಾಗಿರೋ ಬೆಕ್ಕಿನ ಜೊತೆ ಆಟ ಆಡೋದೇ ಒಂದು ಚೆಂದ. ಜೀವನದಲ್ಲಿ ಎಷ್ಟೆ ಟೆನ್ಷನ್ ಇದ್ದರೂ ಬೆಕ್ಕು, ನಾಯಿಯಂತಹ ಮೂಕ ಪ್ರಾಣಿಗಳ ಜೊತೆ ಕೊಂಚ ಸಮಯ ಕಳೆದ್ರೆ ಸಾಕು, ಫುಲ್ ರಿಲ್ಯಾಕ್ಸ್ ಆಗಿ ಬಿಡ್ತೇವೆ. ಈಗ ಇಂಥಹದ್ದೇ ಮುದ್ದಾದ ಬೆಕ್ಕೊಂದು ಮಾಡಿರೋ ಅದ್ಭುತ ಕೆಲಸ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.
ಇಂಟರ್ನೆಟ್ ಜಗತ್ತಿನಲ್ಲಿ ವೈರಲ್ ಆಗಿರೋ ವಿಡಿಯೋ ಇದು. ಈ ವಿಡಿಯೋದಲ್ಲಿ ಬೆಕ್ಕು ಮತ್ತು ಅಂಬೆಗಾಲು ಇಡುವ ಮಗುವನ್ನ ನೋಡಬಹುದು. ಈ ವಿಡಿಯೋ ಕೊಂಚ ಗಮನ ಇಟ್ಟು ನೋಡಿದರೆ ಗೊತ್ತಾಗುತ್ತೆ. ಬೆಕ್ಕೊಂದು ಅಂಬೆಗಾಲಿಡುವ ಮಗುವನ್ನ ಹೇಗೆ ಅಪಾಯದಿಂದ ರಕ್ಷಿಸುತ್ತೆ ಅನ್ನೊದನ್ನ ಈ ವಿಡಿಯೋದಲ್ಲಿ ನೋಡಬಹುದು.
ಈ ವಿಡಿಯೋದಲ್ಲಿ ಪುಟ್ಟ ಮಗು ಆಡ್ತಾ ಆಡ್ತಾ ಮೆಟ್ಟಿಲು ಏರೋದಕ್ಕೆ ನೋಡುತ್ತೆ. ಆಗ ಅಲ್ಲೇ ಕುರ್ಚಿಯ ಮೇಲೆ ಮಲಗಿದ್ದ ಬೆಕ್ಕು, ಛಂಗನ್ನೆ ಜಿಗಿದು ಸಂಭವಿಸಲಿರೋ ಅಪಾಯದಿಂದ ಮಗುವನ್ನ ರಕ್ಷಿಸುವುದಕ್ಕೆ ಓಡೋಡಿ ಹೋಗುತ್ತೆ. ಮಗು ಎಲ್ಲಿ, ಮೆಟ್ಟಿಲ ಮೇಲಿಂದ ಜಾರಿ ಬಿದ್ದು ಬಿಡುತ್ತೆ ಅನ್ನೊ ಭಯಕ್ಕೆ ಬೆಕ್ಕು ಮಗುವನ್ನ ತಡೆಯುತ್ತೆ.
ಈ ವಿಡಿಯೋ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದ್ದು, ‘ಹೌ ಥಿಂಗ್ಸ್ ವರ್ಕ್ ‘ಎಂಬ ಟ್ವಿಟರ್ ಪೇಜ್‌ಲ್ಲಿ ಈ ವಿಡಿಯೋವನ್ನ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ಮೂಕ ಪ್ರಾಣಿಗಳು ಅಂತ ಕಡೆಗಣಿಸೋ ಹಾಗಿಲ್ಲ ಅಂತ ಕೆಲವರು ಕಾಮೆಂಟ್ ಬಾಕ್ಸ್‌ಲ್ಲಿ ಮೆಸೆಜ್ ಹಾಕಿದ್ದಾರೆ. ಇನ್ನೂ ಕೆಲವರು ಈ ಬೆಕ್ಕು ಬೇಬಿ ಸಿಟ್ಟರ್ ಕೂಡಾ ಆಗಿದೆ ಅಂತ ಬರೆದಿದ್ದಾರೆ. ಈ ಬೆಕ್ಕು ಚೂಟಿಯಾಗಿದೆ ಅನ್ನೊದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಹೀಗೆ ಎಲ್ಲರೂ ಈ ಬೆಕ್ಕು ಮಾಡಿರುವ ಕೆಲಸ ನೋಡಿ ಶ್ಲಾಘಿಸಿದ್ದಾರೆ.
ಈಗಾಗಲೇ ಈ ಹಿರೋ ಕ್ಯಾಟ್ ವಿಡಿಯೋವನ್ನ 3.6 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಅಷ್ಟೆ ಅಲ್ಲ ಲಕ್ಷಾಂತರ ಜನರು ಈ ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ಧಾರೆ.