ಮೆಟ್ಟಿಲು ಹತ್ತೋದಕ್ಕೂ ತಾಜಾತನಕ್ಕೂ ಅವಿನಾಭಾವ ಸಂಬಂಧವಿದೆ. ಸಂಶೋಧನೆಯೊಂದರಲ್ಲಿ ಇದು ದೃಢಪಟ್ಟಿದೆ. ಸಂಶೋಧನೆಯ ಪ್ರಕಾರ ಪ್ರತಿದಿನ 10 ನಿಮಿಷ ನೀವು ಮೆಟ್ಟಿಲು ಹತ್ತಿದ್ರೆ ದಿನವಿಡೀ ಫ್ರೆಶ್ ಆಗಿ ಇರಬಹುದು. ಆಂತರಿಕವಾಗಿ ನಿಮ್ಮಲ್ಲಿ ತಾಜಾತನ ಮೂಡುತ್ತದೆ.
ಅಷ್ಟೇ ಅಲ್ಲ 50 ಎಂಜಿ ಕೆಫೀನ್ ಅಥವಾ ಸೋಡಾದಿಂದ ಸಿಗುವಷ್ಟು ಎನರ್ಜಿ 10 ನಿಮಿಷ ಮೆಟ್ಟಿಲು ಹತ್ತಿದ್ರೆ ಸಿಗುತ್ತೆ. ಕೆಫಿನ್ ಹಾಗೂ ಮೆಟ್ಟಿಲು ಹತ್ತುವ ಪ್ರಕ್ರಿಯೆ ಇವೆರಡು ಪರಿಸ್ಥಿತಿಗಳಲ್ಲೂ ಒಂದೇ ರೀತಿಯ ಅನುಭವವಾಗುತ್ತದೆ ಅನ್ನೋದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.
ವ್ಯಾಯಾಮ ಮತ್ತು ಮೆಟ್ಟಿಲು ಹತ್ತುವುದರಿಂದ ಸಿಗುವಷ್ಟು ಶಕ್ತಿಯುತ ಅನುಭವ ಕೆಫಿನ್ ನಿಂದಾಗುವುದಿಲ್ಲ. ಈ ಸಂಶೋಧನೆಯ ಮೂಲ ಉದ್ದೇಶ ಕಚೇರಿಗಳಲ್ಲಿ ಉದ್ಭವವಾಗುವ ಸಮಸ್ಯೆಗಳನ್ನು ದೂರ ಮಾಡುವುದು. ಕಚೇರಿಗಳಲ್ಲಿ ಗಂಟೆಗಟ್ಟಲೆ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವ ಉದ್ಯೋಗಿಗಳಿಗೆ ವ್ಯಾಯಾಮ ಮಾಡಲು ಸಮಯವೇ ಸಿಗುವುದಿಲ್ಲ.
ಹಾಗಾಗಿ ಅಂಥವರೆಲ್ಲ ದಿನನಿತ್ಯ ಕನಿಷ್ಠ 10 ನಿಮಿಷಗಳ ಕಾಲ ಮೆಟ್ಟಿಲುಗಳನ್ನು ಹತ್ತುವುದು ಆರೋಗ್ಯಕ್ಕೆ ಉತ್ತಮ. ಇದ್ರಿಂದ ಫಿಟ್ನೆಸ್ ಕೂಡ ಕಾಪಾಡಿಕೊಳ್ಳಬಹುದು. ಇನ್ಮೇಲೆ ಲಿಫ್ಟ್ ಮೊರೆ ಹೋಗದೆ ಮೆಟ್ಟಿಲುಗಳನ್ನು ಹತ್ತಿಕೊಂಡೇ ಹೋಗಿ.