
ಬುಧವಾರ ಮುಂಬೈನ ಆಸ್ಪತ್ರೆಯಲ್ಲಿ ನಿಧನರಾದ ಬಪ್ಪಿ ಲಹರಿಯನ್ನು ನಟ ಚಿರಂಜೀವಿ ನೆನಪಿಸಿಕೊಂಡಿದ್ದಾರೆ. ಬಪ್ಪಿ ಲಹರಿಗೆ ಸಂತಾಪ ಸೂಚಿಸುವ ಟ್ವೀಟ್‌ನಲ್ಲಿ, ಗಾಯಕ ತನಗಾಗಿ ಹಲವಾರು ಹಿಟ್ ಹಾಡುಗಳನ್ನು ಕೊಟ್ಟಿದ್ದಾರೆ. ಚಲನಚಿತ್ರಗಳ ಜನಪ್ರಿಯತೆಗೆ ಅಗಾಧ ಕೊಡುಗೆ ನೀಡಿದ್ದಾರೆ ಎಂದು ಚಿರಂಜೀವಿ ಸ್ಮರಿಸಿದ್ದಾರೆ.
ಬಪ್ಪಿ ಅವರೊಂದಿಗಿನ ಥ್ರೋಬ್ಯಾಕ್ ಚಿತ್ರವನ್ನು ಹಂಚಿಕೊಂಡ ಚಿರಂಜೀವಿ, ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಮತ್ತು ಗಾಯಕರಾಗಿದ್ದ ಬಪ್ಪಿ ಲಹರಿ ನಿಧನಕ್ಕೆ ಚಿರಂಜೀವಿ ಕಂಬನಿ ಮಿಡಿದಿದ್ದಾರೆ. ಬಪ್ಪಿ ದಾ ಜೊತೆ ಉತ್ತಮ ಒಡನಾಟ ಹೊಂದಿದ್ದ ಚಿರಂಜೀವಿ, ಅವರು ತನಗಾಗಿ ಹಲವಾರು ಬ್ಲಾಕ್ ಬಸ್ಟರ್‌ಗಳನ್ನು ನೀಡಿದ್ದಾರೆ. ಅವರು ತನ್ನ ಚಲನಚಿತ್ರಗಳ ಜನಪ್ರಿಯತೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ನೆನಪಿಸಿಕೊಂಡಿದ್ದಾರೆ.
ಬಾಲಿವುಡ್‌ನ ಡಿಸ್ಕೋ ಕಿಂಗ್ ಅಂತಾನೇ ಜನಪ್ರಿಯರಾಗಿದ್ದ ಬಪ್ಪಿ ಲಹರಿ ತೆಲುಗು ಚಿತ್ರರಂಗದಲ್ಲಿ ಕೂಡ ಅಷ್ಟೇ ಜನಪ್ರಿಯರಾಗಿದ್ದರು. 1986ರ ಸಿಂಹಾಸನಂ ಚಿತ್ರದೊಂದಿಗೆ, ಬಪ್ಪಿ ತೆಲುಗು ಉದ್ಯಮಕ್ಕೆ ಕಾಲಿಟ್ಟರು. ಟಾಲಿವುಡ್ ನಲ್ಲಿ ಅವರು 20ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ.
ಚಿರಂಜೀವಿ ಜೊತೆಗಿನ ಅವರ ಒಡನಾಟವು 1989ರ ಸ್ಟೇಟ್ ರೌಡಿ ಚಲನಚಿತ್ರದಿಂದ ಪ್ರಾರಂಭವಾಯಿತು. ಚಿರಂಜೀವಿಯವರ ಗ್ಯಾಂಗ್ ಲೀಡರ್, ರೌಡಿ ಅಲ್ಲುಡು ಮತ್ತು ಬಿಗ್ ಬಾಸ್ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದರು.
ಬಪ್ಪಿ ಲಹರಿ ನಿಧನಕ್ಕೆ ಅವರ ಅಭಿಮಾನಿಗಳು ಕೂಡ ಕಂಬನಿ ಮಿಡಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ನೆಟ್ಟಿಗರು, ಚಿರಂಜೀವಿ ಅವರೊಂದಿಗಿನ ಹಿಟ್ ಹಾಡುಗಳನ್ನು ಹಂಚಿಕೊಂಡಿದ್ದಾರೆ.
ಬಪ್ಪಿ ಲಹರಿ ಅವರು ಡಿಸ್ಕೋ ಡ್ಯಾನ್ಸರ್, ಹಿಮ್ಮತ್ವಾಲಾ, ಶರಾಬಿ, ಅಡ್ವೆಂಚರ್ಸ್ ಆಫ್ ಟಾರ್ಜಾನ್, ಡ್ಯಾನ್ಸ್ ಡ್ಯಾನ್ಸ್, ಸತ್ಯಮೇವ್ ಜಯತೆ, ಕಮಾಂಡೋ, ಆಜ್ ಕೆ ಶಾಹೆನ್‌ಶಾ, ತಾನೆದಾರ್, ನಂಬರಿ ಆದ್ಮಿ ಮತ್ತು ಶೋಲಾ ಔರ್ ಶಬ್ನಮ್ ಮುಂತಾದ ಚಲನಚಿತ್ರಗಳಿಗೆ ಹಾಡುಗಳನ್ನು ಸಂಯೋಜಿಸಿದ್ದಾರೆ. ಅವರು 2020ರ ಬಾಘಿ-3 ಚಲನಚಿತ್ರಕ್ಕಾಗಿ ಭಂಕಾಸ್ ಹಾಡನ್ನು ಕೊನೆಯದಾಗಿ ಸಂಯೋಜಿಸಿದ್ದಾರೆ.
https://twitter.com/tonyaplacino/status/1493829026091134976?ref_src=twsrc%5Etfw%7Ctwcamp%5Etweetembed%7Ctwterm%5E1493829026091134976%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fbappi-lahiri-mourned-by-telugu-twitter-netizens-recall-his-hit-songs-starring-chiranjeevi-4777835.html