ಈ ಬಾರಿ ಮುಂಗಾರು ಮಳೆ ಆರಂಭದಲ್ಲಿ ಕೈಕೊಟ್ಟರೂ ನಂತರ ಉತ್ತಮವಾಗಿ ಆಗಿದೆ. ರೈತರು ಮೆಕ್ಕೆಜೋಳವನ್ನು ಬೆಳೆದಿದ್ದು, ಆದರೆ ಅಲ್ಲಲ್ಲಿ ಇದಕ್ಕೆ ಲದ್ದಿ ಹುಳು ಬಾಧೆ ಕಾಣಿಸಿಕೊಂಡಿದೆ.
ಇದರ ನಿಯಂತ್ರಣಕ್ಕೆ ಸಾಮೂಹಿಕ ಹತೋಟಿ ಕ್ರಮ ತೆಗೆದುಕೊಳ್ಳಬೇಕು ಎಂದು ಭದ್ರಾವತಿ ಸಹಾಯಕ ಕೃಷಿ ನಿರ್ದೇಶಕ ಶಶಿಧರ ತಿಳಿಸಿದ್ದು, ಸಂಜೆ 5ರ ನಂತರ ಪ್ರತಿ ಲೀಟರ್ ನೀರಿಗೆ ಎಮಾಮೆಕ್ಟಿನ್ ಬೆಂಜೋಯೇಟ್ ಕೀಟನಾಶಕವನ್ನು 0.5 ಗ್ರಾಂ ಬೆರೆಸಿ ಪ್ರತಿ ಎಕರೆಗೆ 150ರಿಂದ 200 ಲೀಟರ್ ದ್ರಾವಣ ಸಿಂಪಡಿಸಬೇಕು ಎಂದು ಹೇಳಿದ್ದಾರೆ.
ಅಲ್ಲದೆ ಇದರ ಜೊತೆಗೆ 10 ಕೆಜಿ ಅಕ್ಕಿ ತೌಡು, 2 ಕೆ.ಜಿ. ಬೆಲ್ಲ, 250 ml ಕ್ಲೋರೋ ಪೈರಿಪಾಸ್ ಕ್ರಿಮಿನಾಶಕ ಹಾಗೂ ಐದು ಲೀಟರ್ ನೀರನ್ನು ಮಿಶ್ರಣ ಮಾಡಿ 24 ಗಂಟೆಗಳ ಕಾಲ ಗಾಳಿ ಆಡದಂತೆ ಚೀಲದಲ್ಲಿ ಗಟ್ಟಿಯಾಗಿ ಕಟ್ಟಿ ಮಾರನೇ ದಿನ ಸಂಜೆ 4:00 ಗಂಟೆ ನಂತರ ಉಂಡೆ ಮಾಡಿ ಒಂದು ಎಕರೆ ಜಮೀನಿನಲ್ಲಿ ಇಡುವ ಮೂಲಕ ಇದನ್ನು ನಿಯಂತ್ರಣಕ್ಕೆ ತರಬಹುದು ಎಂದು ತಿಳಿಸಿದ್ದಾರೆ.