
ತಿನ್ನಲು ಇದು ಕಹಿಯಾಗಿದ್ದರೂ ಇದರಿಂದ ಮಾಡಿದ ಅಡುಗೆಗಳು ರುಚಿಯಾಗಿಯೇ ಇರುತ್ತವೆ. ಹಾಗೆಯೆ ಇದನ್ನ ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ಬಗೆಯ ಪ್ರಯೋಜನಗಳಿವೆ. ಮೆಂತೆ ಸೇವನೆಯಿಂದಾಗುವ ಆರೋಗ್ಯಕರ ಲಾಭಗಳು ಇಲ್ಲಿವೆ ನೋಡಿ.
ಮಗುವಿಗೆ ಎದೆಹಾಲು ಉಣಿಸುತ್ತಿದ್ದೀರಾ?
ಮಗುವಿಗೆ ಎದೆಹಾಲು ಉಣಿಸುತ್ತಿದ್ದರೆ ನಿಮ್ಮ ಆಹಾರ ಪದ್ಧತಿಯಲ್ಲಿ ಮೆಂತ್ಯೆ ಬೀಜಗಳನ್ನು ಸೇವಿಸಿರಿ. ಅದರಿಂದ ಹಾಲಿನ ಉತ್ಪಾದನೆ ಹೆಚ್ಚಾಗುವುದಲ್ಲದೆ ಸ್ತನ ಅಂಗಾಂಶ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಸಕ್ಕರೆ ಕಾಯಿಲೆಗೆ ರಾಮಬಾಣ
ಡಯಾಬಿಟೀಸ್ ಇರುವವರು ಮೆಂತ್ಯೆ ಬೀಜಗಳನ್ನು ತಿಂದರೆ ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆ ಮಾಡಲು ಸಹಾಯಕವಾಗುತ್ತದೆ. ಅಲ್ಲದೆ, ದೇಹಕ್ಕೆ ಇನ್ಸುಲಿನ್ ಅವಶ್ಯಕತೆಯನ್ನೂ ಕಡಿಮೆ ಮಾಡುತ್ತದೆ.
ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ
ಕೊಲೆಸ್ಟ್ರಾಲ್ ಸಮಸ್ಯೆ ಇರುವವರಿಗೆ ಮೆಂತ್ಯೆ ಸೇವನೆಯಿಂದ ಪ್ರಯೋಜನ ಸಿಗಲಿದೆ. ಯಕೃತ್ತಿನಲ್ಲಿ ತಯಾರಾಗುವ ಕೊಬ್ಬಿನ ಅಂಶವನ್ನು ಕಡಿಮೆಗೊಳಿಸುತ್ತದೆ.
ಹಾರ್ಮೋನುಗಳ ಸಮಸ್ಯೆ ನಿವಾರಣೆ
ಇನ್ನು, ಹಾರ್ಮೋನುಗಳ ಸಮಸ್ಯೆ ನಿವಾರಿಸಲು ಹಾಗೂ ಮುಟ್ಟಿನ ನೋವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲು ಮೆಂತ್ಯೆ ಸಹಾಯ ಮಾಡುತ್ತದೆ.
ಚರ್ಮ ಸಮಸ್ಯೆಗಳಿಗೆ ನೆರವು
ಚರ್ಮದ ಉರಿಯೂತದ ಹಲವು ಸಮಸ್ಯೆಗಳಿಗೆ ಮೆಂತ್ಯೆ ದೊಡ್ಡ ರೀತಿಯಲ್ಲಿ ನೆರವು ನೀಡುತ್ತದೆ. ಚರ್ಮ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಕೆಲಸ ಮಾಡುತ್ತದೆ.