ಮೃತಪಟ್ಟ ವ್ಯಕ್ತಿಯನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಇದಕ್ಕಿದ್ದಂತೆ ಆತ ಎಚ್ಚರಗೊಂಡ ಆಘಾತಕಾರಿ ಘಟನೆ ಸ್ಪೇನ್ ನಲ್ಲಿ ನಡೆದಿದೆ.
ಖೈದಿಯಾಗಿದ್ದ ಗೊಂಜಾಲೊ ಮೊಂಟೊಯಾ ಜಿಮೆನೆಜ್ ಎಂಬಾತನನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ನೋಡಿದ ಪೊಲೀಸರು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಲಾಗಿದೆ. ಆತನ ಕುಟುಂಬಕ್ಕೂ ಮಾಹಿತಿ ನೀಡಲಾಯಿತು. ವಿಧಿವಿಜ್ಞಾನ ತಂಡದ ವೈದ್ಯರನ್ನು ಕಳುಹಿಸಿದ ಕೋರ್ಟ್ ಗೆ ಆತನ ಸಾವನ್ನು ದೃಢಪಡಿಸಲಾಯಿತು.
ಜಿಮೆನೆಜ್ ದೇಹವು ಸೈನೊಸಿಸ್‌ನ ಲಕ್ಷಣಗಳನ್ನು ತೋರಿಸಿದೆ ಎಂದು ವೈದ್ಯರು ತೀರ್ಮಾನಿಸಿದ್ದಾರೆ. ಆಮ್ಲಜನಕದ ಕೊರತೆಯಿಂದಾಗಿ ಚರ್ಮದ ಬಣ್ಣವು ಬದಲಾಗಿದೆ ಎಂದು ವರದಿಗಳು ತಿಳಿಸಿವೆ. ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯುತ್ತಿರುವಾಗ ಖೈದಿಯ ಹೃದಯಬಡಿತದ ಸದ್ದು ಕೇಳಿಸಿದೆ. ಇನ್ನೇನು ಶವಪರೀಕ್ಷೆ ನಡೆಸಬೇಕು ಎನ್ನುವ ಕೆಲವೇ ಕ್ಷಣಗಳ ಮೊದಲು ಅವರು ಎಚ್ಚರಗೊಂಡಿದ್ದಾರೆ ಎಂದು ಹೇಳಲಾಗಿದೆ.
ವೈದ್ಯರ ಆಘಾತಕಾರಿ ತಪ್ಪಿನ ನಂತರ ಜಿಮೆನೆಜ್ ನನ್ನು ಮತ್ತೊಂದು ಆಸ್ಪತ್ರೆಗೆ ವರ್ಗಾಯಿಸಲಾಯಿತು. ಇದೀಗ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ.