ಕೃಷ್ಣಗಂಜ್: ಮೃತ ಭಾರತೀಯ ಮಹಿಳೆಗೆ ವಿದಾಯ ಹೇಳಲು ಬಾಂಗ್ಲಾದೇಶಿ ಸಂಬಂಧಿಕರಿಗೆ ಬಿಎಸ್ಎಫ್ ಸಹಾಯ ಮಾಡಿರುವ ಹೃದಯಸ್ಪರ್ಶಿ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಗಡಿ ಗ್ರಾಮವೊಂದರಲ್ಲಿ 70 ವರ್ಷದ ಇಳಾ ಮಂಡಲ್ ಎಂಬಾಕೆ ಮೃತಪಟ್ಟಿದ್ದಾರೆ. ಅವರ ಸಂಬಂಧಿಕರು ಮುಳ್ಳುತಂತಿಯ ಇನ್ನೊಂದು ಬದಿಯಲ್ಲಿರುವ ( ನೆರೆಯ ಬಾಂಗ್ಲಾದೇಶ) ಸಂಬಂಧಿಕರು ಆಕೆಯನ್ನು ಕೊನೆಯ ಬಾರಿಗೆ ನೋಡಬೇಕೆಂದು ಬಯಸಿದ್ದರು.
ಮಹಿಳೆಯ ಅಂತಿಮ ದರ್ಶನಕ್ಕಾಗಿ ಬಾಂಗ್ಲಾದೇಶದ ಸಂಬಂಧಿಕರು ಕಾಯುತ್ತಿದ್ದ ಗಡಿಯಲ್ಲಿರುವ ಝೀರೋ ಪಾಯಿಂಟ್‌ಗೆ ಶವವನ್ನು ಕೊಂಡೊಯ್ಯಲು ಬಿಎಸ್‌ಎಫ್ ವ್ಯವಸ್ಥೆ ಮಾಡಿತು. ಹೀಗಾಗಿ ಕೊನೆಯ ಬಾರಿ ಆಕೆಯ ಸಂಬಂಧಿಕರಿಗೆ ಮಹಿಳೆಯ ಅಂತಿಮ ದರ್ಶನ ಮಾಡುವಂತಾಯಿತು.
ಕೃಷ್ಣಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಮಟಿಯಾರಿ ಗ್ರಾಮದ ನಿವಾಸಿ ಇಳಾ ಮಂಡಲ್ ಎಂಬಾಕೆ ಗುರುವಾರ ಮೃತಪಟ್ಟಿದ್ದಾರೆ. ಆಕೆಯ ಅನೇಕ ಸಂಬಂಧಿಕರು ಬಾಂಗ್ಲಾದೇಶದ ಗಡಿಯ ಇನ್ನೊಂದು ಬದಿಯಲ್ಲಿರುವ ಚುಡಂಗಾದಲ್ಲಿ ವಾಸಿಸುತ್ತಿದ್ದಾರೆ.
ಮೃತದೇಹವನ್ನು ಅಂತಿಮ ನಮನ ಸಲ್ಲಿಸಿದ ಸ್ಥಳಕ್ಕೆ ತರಲು ಕುಟುಂಬಕ್ಕೆ ಬಿಎಸ್ಎಫ್ ಸಹಾಯ ಮಾಡಿದೆ. ಗಡಿ ಕಾಯುವ ಜೊತೆಗೆ, ಬಿಎಸ್ಎಫ್ ಜನರ ನೋವು ಮತ್ತು ಸಂತೋಷದಲ್ಲಿಯೂ ಇರುತ್ತದೆ ಎಂದು ಬಿಎಸ್ಎಫ್ ಕಮಾಂಡಿಂಗ್ ಅಧಿಕಾರಿ ದೇಶ್ ರಾಜ್ ಸಿಂಗ್ ಹೇಳಿದ್ದಾರೆ.