ಮೃಗಾಲಯವೊಂದರಿಂದ ತಪ್ಪಿಸಿಕೊಂಡು ಓಡಿಹೋಗಿದ್ದ ಪೆಂಗ್ವಿನ್ ಅನ್ನು ಪೊಲೀಸರು ರಕ್ಷಿಸಿ, ಮರಳಿ ಬುಡಾಪೆಸ್ಟ್ ಮೃಗಾಲಯಕ್ಕೆ ಹಸ್ತಾಂತರಿಸಿರೋ ಘಟನೆ ಹಂಗೇರಿಯಲ್ಲಿ ನಡೆದಿದೆ.
ಬುಧವಾರ ಮುಂಜಾನೆ ಬುಡಾಪೆಸ್ಟ್ ಮೃಗಾಲಯದ ಸಮೀಪವಿರುವ ರಸ್ತೆಯಲ್ಲಿ ಪುಟ್ಟ ಪೆಂಗ್ವಿನ್ ಅಲೆದಾಡುತ್ತಿರುವುದನ್ನು ಅಧಿಕಾರಿಗಳು ಗುರುತಿಸಿದ್ದಾರೆ. ಆಫ್ರಿಕನ್ ಪೆಂಗ್ವಿನ್ ಸಾನಿಕಾ ಮೃಗಾಲಯದಲ್ಲಿನ ತನ್ನ ಆವರಣದಿಂದ ಹೊರಬರಲು ಯಶಸ್ವಿಯಾಗಿದೆ. ಸ್ಥಳೀಯ ಅಧಿಕಾರಿಗಳು ಪೆಂಗ್ವಿನ್ ಅನ್ನು ಹಿಡಿಯಲು ಪ್ರಯತ್ನಿಸಿದಾಗ ರಸ್ತೆಯ ಕಡೆಗೆ ಓಡಿದೆ. ನಂತರ ಅದನ್ನು ಕಂಬಳಿಯಲ್ಲಿ ಸುತ್ತಿ ಸುರಕ್ಷಿತವಾಗಿ ಮೃಗಾಲಯಕ್ಕೆ ಮರಳಿ ಕರೆತರಲಾಗಿದೆ.
ಸಾನಿಕಾ ಪೆಂಗ್ವಿನ್ ಗೆ ಕೇವಲ 7 ತಿಂಗಳ ವಯಸ್ಸಾಗಿದೆ. ಅಂಟಾರ್ಕ್ಟಿಕ್ ಗೆ ಹೋಲಿಸಿದರೆ ಬೆಚ್ಚಗಿನ ತಾಪಮಾನದಲ್ಲೂ ಬದುಕಬಲ್ಲದು. ಆಫ್ರಿಕನ್ ಪೆಂಗ್ವಿನ್‌ಗಳು ಕಾಡಿನಲ್ಲಿ ಸುಮಾರು 10 ವರ್ಷಗಳ ಕಾಲ ಜೀವಿಸುತ್ತವೆ ಎಂದು ತಿಳಿದುಬಂದಿದೆ.