
ನಾವು ಹೆಚ್ಚು ಹೆಚ್ಚು ಪೌಷ್ಟಿಕಾಂಶಯುತ ಆಹಾರವನ್ನು ಸೇವಿಸಿದರೂ ಹಲವಾರು ರೀತಿಯ ರೋಗ ರುಜಿನಗಳು ಬರುತ್ತವೆ. ಅದರಲ್ಲಿ ಮೂಲವ್ಯಾಧಿಯೂ ಒಂದು. ಮೂಲವ್ಯಾದಿ ಎನ್ನುವುದು ಪ್ರತಿಯೊಬ್ಬರಿಗೂ ಕಾಡುವ ಸಾಮಾನ್ಯ ಸಮಸ್ಯೆ. ಯಾವುದೇ ಆಸ್ಪತ್ರೆಯಲ್ಲಿ ವಾಸಿಯಾಗದ ಚಿಕಿತ್ಸೆಯಲ್ಲೇ ಮುಂದುವರಿಯುವ ಕಾಯಿಲೆ. ಮನೆಯಲ್ಲೇ ಇರುವ ವಸ್ತುಗಳನ್ನು ಬಳಸಿಕೊಂಡು ಹೇಗೆ ಮೂಲವ್ಯಾಧಿಯನ್ನು ಪರಿಹರಿಸಬಹುದು ನೋಡೋಣ…..
ಲೋಳೆಸರದ ಸಿಪ್ಪೆ ತೆಗೆದು ಅದನ್ನು ಸಣ್ಣಸಣ್ಣ ತುಂಡುಗಳನ್ನಾಗಿ ಮಾಡಿ. ಪ್ರತಿದಿನ ಎರಡರಿಂದ ಮೂರು ತುಂಡುಗಳನ್ನು ಸೇವಿಸುವುದರಿಂದ ಮೂಲವ್ಯಾಧಿ ಕ್ರಮೇಣವಾಗಿ ಕಡಿಮೆಯಾಗುತ್ತದೆ. ಇದು ಕಹಿಯಾದ್ದರಿಂದ ಒಂದು ಚಮಚ ಸಕ್ಕರೆ ಸೇರಿಸಿ ಸೇವಿಸಬಹುದು. ಇದು ರಕ್ತವನ್ನು ಕೂಡ ಶುದ್ಧೀಕರಿಸುತ್ತದೆ ಹಾಗೂ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.
ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಲೋಳೆಸರವನ್ನು ಪ್ರತಿದಿನ ಹೀಗೆ ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ ಅದಕ್ಕೆ ಸಕ್ಕರೆ ಸೇರಿಸಿಕೊಂಡು ತಿನ್ನುವುದರಿಂದ ಮೂಲವ್ಯಾಧಿ ಗುಣಮುಖವಾಗುತ್ತದೆ.