ಆಧುನಿಕ ಜೀವನಶೈಲಿಯ ಪರಿಣಾಮ ಮೂಲವ್ಯಾಧಿ ಸಾಮಾನ್ಯ ರೋಗವಾಗಿ ಬದಲಾಗಿದೆ. ಈ ಸಮಸ್ಯೆಗೆ ಆಹಾರ ಕ್ರಮದಲ್ಲಿ ಇರುವ ಸುಲಭವಾದ ಮನೆ ಮದ್ದನ್ನು ತಿಳಿಯೋಣ.
ಮೂಲಂಗಿ ಪೈಲ್ಸ್ ಗೆ ರಾಮಬಾಣ ಎಂದೇ ಹೇಳಬಹುದು. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಮೂಲವ್ಯಾಧಿಯನ್ನು ತಡೆಗಟ್ಟಬಹುದು.
ದಿನಕ್ಕೆ ಎಂಟು ಲೋಟ ನೀರು ಕುಡಿಯುವದು ಕಡ್ಡಾಯ. ಮೂಲವ್ಯಾಧಿ ತೊಂದರೆ ಇದ್ದವರು ಇತರರಿಗಿಂತ ಹೆಚ್ಚು ನೀರು ಕುಡಿಯಬೇಕು. ಇದರಿಂದ ಜೀರ್ಣಾಂಗಗಳಲ್ಲಿ ಮಲ ಗಟ್ಟಿಯಾಗುವುದಿಲ್ಲ. ಮಜ್ಜಿಗೆ, ರಾಗಿ ಅಂಬಲಿ, ಕ್ಯಾರೆಟ್ ಜ್ಯೂಸ್, ಫ್ರೂಟ್ ಜ್ಯೂಸ್, ಕಿತ್ತಳೆ ಹಣ್ಣಿನ ಜ್ಯೂಸ್ ಇವೆಲ್ಲವನ್ನೂ ಸೇವನೆ ಮಾಡುವುದರಿಂದ ಪೈಲ್ಸ್ ಆಗದಂತೇ ತಡೆಯಬಹುದು ಮತ್ತು ಆ ಜಾಗದಲ್ಲಿ ಉರಿಯಾಗುವುದು ಕೂಡ ಕಡಿಮೆಯಾಗುತ್ತದೆ.
ಹಸಿ ಈರುಳ್ಳಿ ಕೂಡ ಮೂಲವ್ಯಾಧಿಗೆ ಉತ್ತಮವಾದ ಮನೆ ಮದ್ದು ಆಗಿದೆ. ಪೈಲ್ಸ್ ನಿಂದ ರಕ್ತ ಬರುತ್ತಿದ್ದರೆ ಹಸಿ ಈರುಳ್ಳಿ ಸೇವನೆ ಮಾಡುವುದರಿಂದ ಮತ್ತು ತುಪ್ಪದಲ್ಲಿ ಹುರಿದು ತಿನ್ನುವುದರಿಂದ ಬೇಗನೆ ಉಪಶಮನ ಆಗುತ್ತದೆ. ಹಸಿರು ಎಲೆಗಳನ್ನು ಮತ್ತು ಹಸಿ ತರಕಾರಿಗಳ ಸೇವನೆಯನ್ನು ಹೆಚ್ಚಿಸಬೇಕು.