ಬಾಲಿವುಡ್ ನಟ ರಾಮ್ ಕಪೂರ್ ಮತ್ತವರ ಪತ್ನಿ ಹೊಸ ಫೆರಾರಿ ಪೋರ್ಟೊಫಿನೊ ಎಂ ಸ್ಪೋರ್ಟ್ಸ್ ಕಾರನ್ನು ಖರೀದಿಸಿದ್ದಾರೆ. ಫೆರಾರಿ ಪೋರ್ಟೊಫಿನೊ ಎಂ ಕಾರಿನ ಬೆಲೆ ಭಾರತದಲ್ಲಿ 3.5 ಕೋಟಿ ರೂಪಾಯಿಯಿಂದ ಆರಂಭ. ರಾಮ್ ಕಪೂರ್ ಖರೀದಿಸಿರುವ ಫೆರಾರಿ ಪೋರ್ಟೊಫಿನೊ ಎಂ, ರೊಸ್ಸೊ ಕೊರ್ಸಾ ಪೇಂಟ್ ಶೇಡ್ನಲ್ಲಿದೆ. ಈ ಸ್ಪೋರ್ಟ್ಸ್ ಕಾರಿನಲ್ಲಿ ಐಷಾರಾಮಿ ಅಲ್ಕಾಂಟರಾ ಕ್ಯುಯೊ ಇಂಟೀರಿಯರ್ ಮತ್ತು ಕನ್ವರ್ಟಬಲ್ ಹಾರ್ಡ್ ರೂಫ್ ಟಾಪ್ ಇದೆ.
ಪೋರ್ಟೋಫಿನೋ M ನಲ್ಲಿನ M ಎಂದರೆ ‘ಮಾರ್ಪಾಡು’ ಎಂದರ್ಥ. ಇದು ಪ್ರಮಾಣಿತ ಪೋರ್ಟೊಫಿನೊಗಿಂತ ಹೆಚ್ಚಿನ ಫೀಚರ್ಗಳನ್ನು ಹೊಂದಿದೆ. ಹೊಸ 8-ಸ್ಪೀಡ್ ಡ್ಯುಯಲ್-ಕ್ಲಚ್ ಟ್ರಾನ್ಸ್ಮಿಷನ್ ಮತ್ತು ವೇರಿಯಬಲ್ ಬೂಸ್ಟ್ ಮ್ಯಾನೇಜ್ಮೆಂಟ್ ಈ ಕಾರಿನಲ್ಲಿದೆ. ಪೋರ್ಟೊಫಿನೊ M 3.9-ಲೀಟರ್ ಟರ್ಬೋ ಚಾರ್ಜ್ಡ್ V8 ಎಂಜಿನ್ನೊಂದಿಗೆ ಬರುತ್ತದೆ. ಇದು 604 Bhp ಅನ್ನು ಉತ್ಪಾದಿಸುತ್ತದೆ. ಈ ಕಾರು ಕೇವಲ 3.45 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿಮೀ ವೇಗವನ್ನು ಹೆಚ್ಚಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.
ರಾಮ್ ಕಪೂರ್ ಬಳಿ ಸಾಕಷ್ಟು ಐಷಾರಾಮಿ ಕಾರುಗಳಿಗೆ. ಪೋರ್ಷೆ 911 ಕ್ಯಾರೆರಾ ಎಸ್, ಮರ್ಸಿಡಿಸ್-ಎಎಮ್ಜಿ ಜಿ63 ಮತ್ತು ಬಿಎಂಡಬ್ಲ್ಯು ಎಕ್ಸ್5 ಅನ್ನು ಸಹ ರಾಮ್ ಕಪೂರ್ಹೊಂದಿದ್ದಾರೆ. ಈ ಸಾಲಿಗೆ ಇದೀಗ ಫೆರಾರಿ ಪೋರ್ಟೊಫಿನೊ ಎಂ ಕೂಡ ಸೇರ್ಪಡೆಯಾಗಿದೆ. ರಾಮ್ ಕಪೂರ್ ಬಳಿ BMW R18 ಮತ್ತು ಇಂಡಿಯನ್ ರೋಡ್ಮಾಸ್ಟರ್ ಡಾರ್ಕ್ ಹಾರ್ಸ್, BMW K 1600 B ನಂತಹ ಕೆಲವು ಅಪರೂಪದ ಮೋಟಾರ್ಸೈಕಲ್ಗಳೂ ಇವೆ.