ಕರ್ನಾಟಕದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಅದ್ರಲ್ಲು ರಾಜಧಾನಿ ಬೆಂಗಳೂರಲ್ಲಿ ವೈರಸ್ ವೇಗವಾಗಿ ಹರಡುತ್ತಿದೆ. ಎರಡು ವಾರಗಳ ಹಿಂದೆ 800-1000 ಪ್ರಕರಣಗಳು ವರದಿಯಾಗುತ್ತಿದ್ದ ನಗರದಲ್ಲಿ ಈಗ ದೈನಂದಿನವಾಗಿ 10 ಸಾವಿರಕ್ಕು ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಮೂರನೇ ಅಲೆ ಶುರುವಾಗಿದೆ ಎಂದು ಹಲವಾರು ತಜ್ಞರು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಹೊಸ ಅಲೆ ಎದುರಿಸಲು ತಯಾರಾಗುತ್ತಿರುವ ಬಿಬಿಎಂಪಿ, ಕೊರೋನಾ ಸೋಂಕಿನಿಂದ ಸಾಯುವವರಿಗೆ ಚಿತಾಗಾರಗಳನ್ನ ನಿಗದಿ ಮಾಡಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೋನಾದಿಂದ ಮರಣ ಹೊಂದುವವರಿಗೆ ಈ ಚಿತಾಗಾರಗಳನ್ನ ನಿಗದಿ ಮಾಡಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ 12 ರುದ್ರಭೂಮಿಗಳಿದ್ದು ಅದರಲ್ಲಿ 7 ಚಿತಾಗಾರಗಳನ್ನ ಕೊರೋನಾ ರೋಗದಿಂದ ಸಾಯುವವರಿಗೆ ಮೀಸಲಿಡಲಾಗಿದೆ.
ಎಮ್‌ಎಸ್ ಪಾಳ್ಯ ಚಿತಾಗಾರ, ಕೂಡ್ಲು ಕೇಂದ್ರ ಚಿತಾಗಾರ, ಪಣತ್ತೂರು ಚಿತಾಗಾರ, ಕೆಂಗೇರಿ ಹಿಂದೂ ರುಧ್ರಭೂಮಿ, ಸುಮ್ಮನಹಳ್ಳಿ ಚಿತಾಗಾರ, ಪೀಣ್ಯ ಚಿತಾಗಾರ ಹಾಗೂ ಬನಶಂಕರಿ ಚಿತಾಗಾರ ಸೇರಿದಂತೆ ಒಟ್ಟು ಏಳು ಚಿತಾಗಾರಗಳನ್ನ ಕೋವಿಡ್ ನಿಂದ ಮೃತರಾಗುವವರಿಗೆ ನಿಗದಿ ಮಾಡಲಾಗಿದೆ. ಜೊತೆಗೆ ಚಿತಾಗಾರಗಳನ್ನ ಸಂಪರ್ಕಿಸಲು ದೂರವಾಣಿ ಸಂಖ್ಯೆಗಳನ್ನು ಪಾಲಿಕೆ ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗಿದೆ.