ಏಕಕಾಲದಲ್ಲಿ ಎರಡು ಕಂಪನಿಗಳಲ್ಲಿ ಕೆಲಸ ಮಾಡುವ ಮೂಲಕ ಎರಡು ವೇತನ ಪಡೆಯುವ ‘ಮೂನ್ ಲೈಟಿಂಗ್’ ಗೆ ಈಗ ಐಬಿಎಂ ಕೂಡ ಅಪಸ್ವರ ಎತ್ತಿದೆ. ಐಬಿಎಂ ದೇಶದಲ್ಲಿ ಲಕ್ಷಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿರುವ ದೊಡ್ಡ ತಂತ್ರಜ್ಞಾನ ಕಂಪನಿಯಾಗಿದೆ.
ಈ ಕುರಿತಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಕಂಪನಿಯ ಭಾರತ ಮತ್ತು ದಕ್ಷಿಣ ಏಷ್ಯಾ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಪಟೇಲ್, ಮೂನ್ ಲೈಟಿಂಗ್ ಅನೈತಿಕ ಕೆಲಸವಾಗಿದೆ ಎಂದು ಹೇಳಿದ್ದಾರೆ.
ಐಬಿಎಂಗೆ ಸೇರುವ ಸಂದರ್ಭದಲ್ಲಿ ಅಭ್ಯರ್ಥಿಗಳು ನಮಗೆ ಮಾತ್ರ ಕೆಲಸ ಮಾಡುವ ಕುರಿತಂತ ಒಪ್ಪಂದಕ್ಕೆ ಸಹಿ ಹಾಕಿರುತ್ತಾರೆ. ಆ ಬಳಿಕ ಮತ್ತೊಂದು ಉದ್ಯೋಗ ಮಾಡುವುದು ನೈತಿಕವಾಗಿ ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.
ಮೂನ್ ಲೈಟಿಂಗ್ ಕುರಿತು ವಿಪ್ರೋ ಅಧ್ಯಕ್ಷರು ಸಹ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಜೊತೆಗೆ ಇನ್ಫೋಸಿಸ್ ಮೂನ್ ಲೈಟಿಂಗ್ ನಲ್ಲಿ ತೊಡಗುವ ತನ್ನ ಉದ್ಯೋಗಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿತ್ತು. ಇದೀಗ ಐಬಿಎಂ ಕೂಡ ಮೂನ್ ಲೈಟಿಂಗ್ ಗೆ ತನ್ನ ವಿರೋಧ ವ್ಯಕ್ತಪಡಿಸಿದೆ.