
ಮೂತ್ರಪಿಂಡದ ಕಲ್ಲಿನ ಸಮಸ್ಯೆ ನಿಮ್ಮನ್ನು ಬಹುವಾಗಿ ಕಾಡುತ್ತಿದೆಯೇ. ಜೀವನಶೈಲಿಯಲ್ಲಿ ಕೆಲವಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಮೂತ್ರಪಿಂಡದ ಸಮಸ್ಯೆಯಿಂದ ಶಾಶ್ವತ ಪರಿಹಾರ ಕಂಡುಕೊಳ್ಳ ಬಹುದು.
ಇದಕ್ಕೆ ಸರಳವಾದ ಹಾಗೂ ಸುಲಭ ಮಾರ್ಗ ಎಂದರೆ ಸಾಕಷ್ಟು ನೀರು ಕುಡಿಯುವುದು. ದಿನಕ್ಕೆ ಮೂರರಿಂದ ನಾಲ್ಕು ಲೀಟರ್ ನಷ್ಟು ನೀರು ಕುಡಿಯುವುದರಿಂದ ಯಾವ ಸಮಸ್ಯೆಯೂ ನಿಮ್ಮನ್ನು ಕಾಡದು.
ನಿಂಬೆ ರಸದೊಂದಿಗೆ ಆಲಿವ್ ಎಣ್ಣೆಯನ್ನು ಬೆರೆಸಿ ಕುಡಿಯುವುದರಿಂದ ಮೂತ್ರಪಿಂಡದ ಕಲ್ಲಿನ ಸಮಸ್ಯೆ ದೂರವಾಗುತ್ತದೆ. ಆ್ಯಪಲ್ ಸೇವಿಸಿದಾಗ ಈ ಕಲ್ಲುಗಳು ಸಣ್ಣ ಕಣಗಳಾಗಿ ಒಡೆಯುತ್ತವೆ. ದೇಹದಿಂದ ವಿಷಕಾರಿ ತ್ಯಾಜ್ಯವೂ ಹೊರ ಹೋಗುತ್ತದೆ.
ದಾಳಿಂಬೆ ಸೇವನೆಯಿಂದಲೂ ರೋಗ ನಿರೋಧಕ ಶಕ್ತಿ ಹೆಚ್ಚಿ ಈ ಕಲ್ಲಿನ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಮೂತ್ರಪಿಂಡಗಳ ಕಲ್ಲಿನ ಸಮಸ್ಯೆ ನಿವಾರಣೆಗೆ ನೆಲ್ಲಿಕಾಯಿಯೂ ನೆರವಾಗುತ್ತದೆ. ನಿತ್ಯ ಒಂದು ಚಮಚ ಆಮ್ಲಾ ಪುಡಿಯನ್ನು ಸೇವಿಸಿದರೆ ಈ ಸಮಸ್ಯೆ ದೂರವಾಗುತ್ತದೆ.