ಶಾರೀರಿಕ ಸಂಬಂಧ ಬೆಳೆಸಲು ಯಾವುದೇ ಸಮಯವನ್ನು ನಿಗದಿಪಡಿಸಲಾಗಿಲ್ಲ. ಅನುಕೂಲಕ್ಕೆ ತಕ್ಕಂತೆ ಜನರು ಶಾರೀರಿಕ ಸಂಬಂಧ ಬೆಳೆಸುತ್ತಾರೆ. ಯಾವ ಸಮಯದಲ್ಲಿ ಲೈಂಗಿಕ ಕ್ರಿಯೆಯನ್ನು ಮನಸ್ಸು ಜಾಸ್ತಿ ಬಯಸುತ್ತೆ ಎಂಬುದನ್ನು ಸಂಶೋಧನೆಯೊಂದು ಬಹಿರಂಗಪಡಿಸಿದೆ.
ಮನುಷ್ಯನ ಮೂಡ್ ಕೆಟ್ಟಾಗ ಆತನ ಮನಸ್ಸು ಹೆಚ್ಚಾಗಿ ಸೆಕ್ಸ್ ಬಯಸುತ್ತಂತೆ. ಯಾವಾಗ ಮತ್ತು ಏಕೆ ಶಾರೀರಿಕ ಸಂಬಂಧ ಹೊಂದಲು ಮನುಷ್ಯ ಬಯಸುತ್ತಾನೆ ಎನ್ನುವ ಬಗ್ಗೆ ಅನೇಕ ಸಂಶೋಧನೆಗಳಾಗಿವೆ. ಈ ಹೊಸ ಸಂಶೋಧನೆಯಲ್ಲಿ ಮನುಷ್ಯ ಯಾವಾಗ ಹೆಚ್ಚು ಶಾರೀರಿಕ ಸಂಬಂಧ ಹೊಂದಲು ಹಾತೊರೆಯುತ್ತಾನೆ ಎಂಬುದನ್ನು ಬಹಿರಂಗಪಡಿಸಲಾಗಿದೆ.
ಮಾನಸಿಕ ಒತ್ತಡಕ್ಕೆ ಒಳಗಾದಾಗ, ನಿರಾಶೆಯಾದಾಗ, ಮೂಡ್ ಕೆಟ್ಟಾಗ ಮನುಷ್ಯನ ಮನಸ್ಸು ಅಶ್ಲೀಲ ವಿಚಾರವನ್ನು ಯೋಚಿಸುತ್ತದೆಯಂತೆ. ಆಗ ಶಾರೀರಿಕ ಸಂಬಂಧ ಹೊಂದುವ ಬಯಕೆಯುಂಟಾಗುತ್ತದೆಯಂತೆ. ಮಾನಸಿಕ ಒತ್ತಡಕ್ಕೆ ಒಳಗಾದಾಗ ಕೆಲ ಪುರುಷರು ಶಾರೀರಿಕ ಸಂಬಂಧ ಹೊಂದಿದ್ರೆ, ಮತ್ತೆ ಕೆಲವರು ಹಸ್ತಮೈಥುನದಲ್ಲಿ ಖುಷಿಯಾಗ್ತಾರಂತೆ.
ಪುರುಷರಿಗೆ ತಮ್ಮನ್ನು ನಿಯಂತ್ರಿಸಿಕೊಳ್ಳುವ ಪರಿ ಗೊತ್ತಿಲ್ಲ. ಸೆಕ್ಸ್ ವಿಚಾರದಲ್ಲಿ ಅವರ ಬಯಕೆ ಒಂದೇ ಬಾರಿ ಏರಿಕೆಯಾಗುತ್ತದೆ ಎನ್ನುತ್ತಿದೆ ಸಂಶೋದನೆ. ತಮ್ಮ ಸಾವಿನ ಬಗ್ಗೆ ಯೋಚನೆ ಮಾಡುವ ಪುರುಷ, ಸಾವಿಗಿಂತ ಮೊದಲು ಹೆಚ್ಚು ಮಕ್ಕಳನ್ನು ಪಡೆಯಲು ಇಚ್ಛಿಸುತ್ತಾನೆ ಎಂಬುದನ್ನು ವಿಶ್ವವಿದ್ಯಾನಿಲಯದ ಸಂಶೋಧನೆ ಹೇಳಿದೆ.