ಚೀನಾ ಸೇರಿದಂತೆ ಅನೇಕ ದೇಶಗಳಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಸೋಂಕು ಭಾರತದಲ್ಲೂ ಆತಂಕ ಸೃಷ್ಟಿಸಿದೆ. ಹಾಗಾಗಿ ಕೇಂದ್ರ ಸರ್ಕಾರ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ತಾ ಇದೆ.
ಕೋವಿಡ್ ವಿರುದ್ಧ ಹೋರಾಡಲು ಸರ್ಕಾರ ಭಾರತ್ ಬಯೋಟೆಕ್ ನಾಸಲ್ ಲಸಿಕೆಯನ್ನು ಈಗಾಗ್ಲೇ ಬೂಸ್ಟರ್ ಡೋಸ್ ಆಗಿ ಪರಿಚಯಿಸಿದೆ. ಮೂಗಿನಲ್ಲಿ ಹಾಕಬಲ್ಲ ಈ ಲಸಿಕೆಯ ಬೆಲೆ ಕೂಡ ಬಹಿರಂಗವಾಗಿದೆ.
ಈ ಲಸಿಕೆ ಪಡೆಯಲು ಇಚ್ಚಿಸುವವರು 800 ರೂಪಾಯಿ ಜೊತೆಗೆ 5 ಪ್ರತಿಶತ ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಈ ಲಸಿಕೆಯ ವೆಚ್ಚವನ್ನು ಸರ್ಕಾರವೇ ನಿಗದಿಪಡಿಸಿದೆ. ಈ ಲಸಿಕೆಯ ವೈಜ್ಞಾನಿಕ ಹೆಸರು BBV154 ಮತ್ತು ಭಾರತ್ ಬಯೋಟೆಕ್ ಇದನ್ನು iNCOVACC ಎಂದು ಹೆಸರಿಸಿದೆ. ಮುಂದಿನ ವಾರದ ವೇಳೆಗೆ ಮೂಗಿನಲ್ಲಿ ಹಾಕಬಹುದಾದ ಈ ಲಸಿಕೆ ಖಾಸಗಿ ಕೇಂದ್ರಗಳಿಗೆ ತಲುಪಲಿದೆ.
ನಾಸಲ್ ಲಸಿಕೆಯನ್ನು ಕೋವಿನ್ ಪೋರ್ಟಲ್‌ನಲ್ಲಿ ಪಟ್ಟಿ ಮಾಡಲು ಸರ್ಕಾರದಿಂದ ಅನುಮೋದನೆ ಪಡೆದಿದ್ದರೂ ಇನ್ನೂ ಅಳವಡಿಸಿಲ್ಲ. ಕೆಲವೇ ದಿನಗಳಲ್ಲಿ ಈ ಲಸಿಕೆ ಕೋವಿನ್ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರುತ್ತದೆ ಮತ್ತು ಲಸಿಕೆ ಪಡೆಯಲಿಚ್ಛಿಸುವವರು ಬುಕ್ಕಿಂಗ್ ಕೂಡ ಮಾಡಬಹುದು. ಮುಂದಿನ ವಾರದ ವೇಳೆಗೆ ಖಾಸಗಿ ಕೇಂದ್ರಗಳಿಗೆ ಲಸಿಕೆ ಬರುವ ಸಾಧ್ಯತೆಯಿದ್ದು, ನಂತರ ಜನರು ಅದನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.