ಹಿಂದೂ ಕಾರ್ಯಕರ್ತನೊಬ್ಬ ಹನುಮಂತ ದೇಗುಲದಲ್ಲಿ ಮುಸ್ಲಿಂ ಯುವಕರಿಗೆ ಹನುಮಾನ್ ಚಾಲೀಸಾ ಹೇಳಿ ಕೊಟ್ಟಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಲ್ಲದೆ ಇದು ಮಿಶ್ರ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ.
ಘಟನೆ ಉತ್ತರ ಪ್ರದೇಶದ ಆಲಿಘಢ ಜಿಲ್ಲೆಯ ಅಸ್ತಾಪುರ ಗ್ರಾಮದಲ್ಲಿ ನಡೆದಿದ್ದು, ಆಲಿಘಡದ ಆಲ್ ಇಂಡಿಯಾ ಹಿಂದೂ ಸೇನಾದ ಜಿಲ್ಲಾಧ್ಯಕ್ಷ ಸಚಿನ್ ಶರ್ಮಾ, ಮುಸ್ಲಿಂ ಯುವಕರಿಗೆ ಹನುಮಾನ್ ಚಾಲೀಸಾ ಹೇಳಿಕೊಟ್ಟಿದ್ದಾರೆ.
ಈ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಚಿನ್ ಶರ್ಮಾ, ಸನಾತನ ಧರ್ಮದ ಅರಿವು ಇತರೆ ಧರ್ಮದವರಿಗೂ ತಿಳಿಯಲಿ ಎಂಬ ಕಾರಣಕ್ಕೆ ಈ ಕಾರ್ಯ ಮಾಡಿದ್ದೇನೆ ಎಂದು ಹೇಳಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಸಚಿನ್ ಶರ್ಮಾ ಹನುಮಾನ್ ಚಾಲೀಸಾ ಹೇಳುತ್ತಿದ್ದರೆ, ಸುತ್ತಲು ಕುಳಿತ್ತಿದ್ದ ಮುಸ್ಲಿಂ ಯುವಕರು ಅದನ್ನು ಕೇಳಿಸಿಕೊಳ್ಳುತ್ತಿದ್ದಾರೆ.
ಇನ್ನು ಈ ಕುರಿತಂತೆ ಪ್ರತಿಕ್ರಿಯಿಸಿರುವ ಆಲಿಘಢ ಮುಸ್ಲಿಂ ಯೂನಿವರ್ಸಿಟಿಯ ಸುನ್ನಿ ಥಿಯಾಲಜಿ ವಿಭಾಗದ ಮಾಜಿ ಮುಖ್ಯಸ್ಥ ಮುಫ್ತಿ ಜೈದ್ ಆಲಿ, ಮುಸ್ಲಿಂ ಯುವಕರು ಹನುಮಾನ್ ಚಾಲೀಸಾ ಕೇಳಿರುವುದರಲ್ಲಿ ತಪ್ಪಿಲ್ಲ. ಆದರೆ ಅದನ್ನು ಬಲವಂತವಾಗಿ ಹೇರಬಾರದು ಎಂದು ತಿಳಿಸಿದ್ದಾರೆ.