ಮುಸ್ಲಿಂ ಉದ್ಯಮಿಯೊಬ್ಬರು ದೇಗುಲವೊಂದಕ್ಕೆ 25 ಲಕ್ಷ ರೂಪಾಯಿ ಮೌಲ್ಯದ ನಿವೇಶನವನ್ನು ದೇಣಿಗೆಯಾಗಿ ನೀಡುವುದರ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ.
ಯಾದಗಿರಿ ಪುರಸಭೆ ಮಾಜಿ ಅಧ್ಯಕ್ಷ ಅಜೀಜ್ ಅಹ್ಮದ್ ಶಾ, ಹಿರೇಅಗಸಿ ಹನುಮಾನ್ ದೇವಸ್ಥಾನ ಟ್ರಸ್ಟಿಗೆ 30*40 ಅಡಿ ನಿವೇಶನವನ್ನು ನೀಡಿದ್ದು, ಈ ಹಿಂದೆ ರಸ್ತೆ ಅಗಲೀಕರಣ ವೇಳೆ ತೆರವುಗೊಳಿಸಲಾಗಿದ್ದ ತಡೆ ಗೋಡೆಯನ್ನು ಈ ಜಾಗದಲ್ಲಿ ಮರು ನಿರ್ಮಾಣ ಮಾಡಲಾಗುತ್ತದೆ.
ರಸ್ತೆ ಅಗಲೀಕರಣದ ವೇಳೆ ಹನುಮಾನ್ ದೇಗುಲದ ತಡೆಗೋಡೆ ತೆರವುಗೊಳಿಸಲಾಗಿದ್ದು, ಇದರ ನಿರ್ಮಾಣಕ್ಕೆ ಪಕ್ಕದಲ್ಲಿಯೇ ಇದ್ದ ಅಜೀಜ್ ಅಹಮದ್ ಶಾ ಅವರ ಜಾಗದ ಅವಶ್ಯಕತೆ ಇತ್ತು. ಟ್ರಸ್ಟ್ ನವರು ಸಂಪರ್ಕಿಸಿದ ವೇಳೆ ಹಣ ಪಡೆಯದೆ ಇದನ್ನು ನೀಡಿದ್ದಾರೆ. ಜೊತೆಗೆ ದೇಗುಲದ ಇತರೆ ಅಭಿವೃದ್ಧಿ ಕಾರ್ಯಗಳಿಗೂ ಸಹಕಾರ ನೀಡಲು ಮುಂದಾಗಿದ್ದಾರೆ.