ವೇತನ ಹೆಚ್ಚಳ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಸರ್ಕಾರಿ ನೌಕರರು ಮಾರ್ಚ್ 1 ರಂದು ಕಚೇರಿಗೆ ಗೈರು ಹಾಜರಾಗಿ ಮುಷ್ಕರ ನಡೆಸಿದ್ದರು.
ಆದರೆ ನೌಕರರ ಬೇಡಿಕೆಗಳಿಗೆ ತಕ್ಷಣವೇ ಸರ್ಕಾರ ಸ್ಪಂದಿಸಿದ ಕಾರಣ ಮುಷ್ಕರವನ್ನು ಹಿಂಪಡೆದು ಮರುದಿನದಿಂದ ಎಂದಿನಂತೆ ನೌಕರರು ಕೆಲಸಕ್ಕೆ ಹಾಜರಾಗಿದ್ದರು.
ಇದೀಗ ಸರ್ಕಾರ ಸಿಹಿ ಸುದ್ದಿ ಒಂದನ್ನು ನೀಡಿದ್ದು, ಮಾರ್ಚ್ 1ರಂದು ಮುಷ್ಕರ ಮಾಡಿ ಕಚೇರಿಗೆ ಗೈರು ಹಾಜರಾದುದನ್ನು ನೌಕರರ ಹಕ್ಕಿನಲ್ಲಿರುವ ರಜೆ ಅಥವಾ ಪಡೆಯಲು ಅರ್ಹವಿರುವ ರಜೆ ಎಂದು ಪರಿಗಣಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ.