ನೀವು ಇಂಥಾ ದೃಶ್ಯ ಸಿನೆಮಾದಲ್ಲಿ ಮಾತ್ರ ನೋಡೋದಕ್ಕೆ ಸಾಧ್ಯ. ಹಿರೋಯಿನ್ ಅಪಾಯದಲ್ಲಿ ಇದ್ದಾಗ ಹಿರೋ ಬಂದು ಸೂಪರ್ ಮ್ಯಾನ್ ನಂತೆ ಆಕೆಯನ್ನ ಸೇಫ್ ಮಾಡಿರ್ತಾನೆ. ಅಂತಹ ದೃಶ್ಯ ನೋಡಿದಾಗ ಇದೆಲ್ಲ ರಿಯಲ್ ಲೈಫಲ್ಲಿ ಆಗೋದಕ್ಕೆ ಸಾಧ್ಯವೇ ಇಲ್ಲ ಅಂತ ಹೇಳ್ತಿರಾ ತಾನೆ. ಹಾಗಾದ್ರೆ, ಈ ದೃಶ್ಯ ನೋಡಿ ಇದು ಸೇಮ್ ಟು ಸೇಮ್ ಸಿನೆಮಾ ದೃಶ್ಯ ಇದ್ದ ಹಾಗೆ ಇದೆ.
ಅದೊಂದು ವಿಶಾಲವಾದ ರಸ್ತೆ. ಆ ರಸ್ತೆಯಲ್ಲಿ ಮಹಿಳೆ ತನ್ನ ಸೆಡಾನ್ ಕಾರನ್ನ ಡ್ರೈವ್ ಮಾಡಿಕೊಂಡು ಬರುತ್ತಾಳೆ. ಅದೇ ರಸ್ತೆ ಪ್ರವಾಹದ ನೀರಿನಿಂದ ತುಂಬಿಹೋಗಿತ್ತು. ಪ್ರವಾಹದ ನೀರಿನಿಂದಾಗಿ ಅಲ್ಲೇ ಇದ್ದ ರಸ್ತೆಯ ಸಿಂಕ್ಹೋಲ್ ಓಪನ್ ಆಗಿತ್ತು. ನೋಡ ನೋಡುತ್ತಲೇ ಪ್ರವಾಹದ ನೀರಲ್ಲಿ ಕಾರ್ ಕೂಡಾ ಸಿಂಕ್ ಹೋಲ್‌ನಲ್ಲಿ ಮುಳುಗೋಕೆ ಶುರುವಾಗಿತ್ತು. ತಕ್ಷಣವೇ ಅಲ್ಲಿದ್ದ ಜನರು ಕಾರಿನ ಒಳಗೆ ಇದ್ದ ಮಹಿಳೆಯನ್ನ ರಕ್ಷಿಸಲು ದೌಡಾಯಿಸಿ ಬರುತ್ತಾರೆ.
ಕಾರು ಮುಳುಗದೇ ಇರುವಂತೆ ಹಗ್ಗದ ಸಹಾಯದಿಂದ ಕೆಲವರು ಗಟ್ಟಿಯಾಗಿ ಹಿಡಿದರೆ, ಇನ್ನುಕೆಲವರು ಕಾರಿನ ವಿಂಡ್ ಶಿಲ್ಡ್‌ನ್ನ ಅಂದರೆ ಹಿಂದಿನ ಗಾಜನ್ನ ಒಡೆದು ಒಳಗಿದ್ದ ಮಹಿಳೆಯನ್ನ ಹೊರಗೆ ಎಳೆದು ರಕ್ಷಿಸಿದ್ದಾರೆ.
ಮಹಿಳೆ ಸುರಕ್ಷಿತವಾಗಿ ಕಾರಿನಿಂದ ಹೊರ ಬಂದ ನಂತರ, ಕೆಲವೇ ಕೆಲವು ನಿಮಿಷಗಳಲ್ಲಿ ಕಾರು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಕೇವಲ ಹಿಂಭಾಗ ಮಾತ್ರ ತೇಲ್ತಾ ಇರೋದನ್ನ ಈ ವಿಡಿಯೋದಲ್ಲಿ ನೋಡಬಹುದಾಗಿದೆ.
ಇಲ್ಲಿ ಈ ರೀತಿ ಮಹಿಳೆಯನ್ನ ರಕ್ಷಿಸಿರುವುದು ಸ್ಥಳೀಯ ಅಗ್ನಿಶಾಮಕ ದಳದ ಸದಸ್ಯರು ಎಂದು ಹೇಳಲಾಗುತ್ತಿದೆ. ಮಹಿಳೆಗೆ ಚಿಕ್ಕ-ಪುಟ್ಟ ಗಾಯಗಳಾಗಿದ್ದು, ಆಕೆ ಸುರಕ್ಷಿತವಾಗಿದ್ದಾರೆ. ಸದ್ಯಕ್ಕೆ ಈ ಸಿಂಕ್‌ಹೋಲ್‌ನ್ನ ಮುಚ್ಚಲಾಗಿದ್ದು, ರಸ್ತೆಯಲ್ಲಿ ಓಡಾಡೋ ವಾಹನಗಳೀಗೆ ಬೇರೆ ಪರ್ಯಾಯ ಮಾರ್ಗಗಳನ್ನ ಸೂಚಿಸಲಾಗಿದೆ.