ಸೌಂದರ್ಯ ಹೆಚ್ಚಿಸುವಲ್ಲಿ ಮುಲ್ತಾನಿ ಮಿಟ್ಟಿ ಹೆಚ್ಚಿನ ಪಾತ್ರ ವಹಿಸುತ್ತದೆ. ಮುಖದಲ್ಲಿನ ಎಣ್ಣೆಯ ಅಂಶ ಕಡಿಮೆ ಮಾಡಿ. ಚರ್ಮವನ್ನು ನಳನಳಿಸುವಂತೆ ಮಾಡುತ್ತದೆ. ಸಾಕಷ್ಟು ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ನಿವಾರಿಸುವ ಗುಣ ಈ ಮುಲ್ತಾನಿ ಮಿಟ್ಟಿಯಲ್ಲಿದೆ. ಇದರ ಉಪಯೋಗದ ಬಗ್ಗೆ ತಿಳಿಯೋಣ ಬನ್ನಿ.
* ಇದರ ಪ್ಯಾಕ್ ಅನ್ನು ಹಚ್ಚಿಕೊಳ್ಳುವುದರಿಂದ ಮುಖದಲ್ಲಿನ ಕಲ್ಮಶಗಳನ್ನು ನಿವಾರಿಸುತ್ತದೆ, ಎಣ್ಣೆ , ಕೊಳಕನ್ನು ತೆಗೆದು ಹಾಕುತ್ತದೆ.
* ಇದು ಎಲ್ಲಾ ತ್ವಚೆಯವರಿಗೂ ಹೇಳಿ ಮಾಡಿಸಿದ ಪ್ಯಾಕ್. ಮೊಡವೆಯ ಸಮಸ್ಯೆ ಇರುವವರು ಇದನ್ನು ಹಚ್ಚಿಕೊಳ್ಳುವುದರಿಂದ ಮೊಡವೆ ಕಡಿಮೆಯಾಗುತ್ತದೆ.
* ಇದನ್ನು ಸ್ಕ್ರಬ್ ರೀತಿ ಬಳಸುವುದರಿಂದ ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್ ಗಳನ್ನು ನಿವಾರಿಸಿಕೊಳ್ಳಬಹುದು,
* ಇದು ಚರ್ಮದ ಆರೋಗ್ಯ ಹಾಗೂ ಸ್ಕೀನ್ ಟೋನ್ ಅನ್ನು ಹೆಚ್ಚಿಸುತ್ತದೆ,
* 1 ಟೇಬಲ್ ಚಮಚ ಮುಲ್ತಾನಿ ಮಿಟ್ಟಿ ಗೆ 2 ಟೀ ಸ್ಪೂನ್ ರೋಸ್ ವಾಟರ್ ಹಾಕಿ ಮಿಶ್ರಣ ಮಾಡಿಕೊಂಡು ಮುಖಕ್ಕೆ ಪ್ಯಾಕ್ ಹಚ್ಚಿಕೊಂಡು 30 ನಿಮಿಷ ಮುಖ ತೊಳೆದರೆ ಇದು ಎಣ್ಣೆ ತ್ವಚೆಯವರ ಸಮಸ್ಯೆ ನಿವಾರಣೆಯಾಗುತ್ತದೆ.
* 1 ಟೇಬಲ್ ಸ್ಪೂನ್ ಮುಲ್ತಾನಿ ಮಿಟ್ಟಿಗೆ 1 ಟೀ ಸ್ಪೂನ್ ಗಂದದ ಪುಡಿ ಸ್ವಲ್ಪ ನೀರು ಸೇರಿಸಿ ಪ್ಯಾಕ್ ತಯಾರಿಸಿಕೊಳ್ಳಿ. ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳುವುದರಿಂದ ಸ್ಕೀನ್ ಟೋನ್ ಚೆನ್ನಾಗಿ ಆಗುತ್ತದೆ.
* 2 ಟೇಬಲ್ ಸ್ಪೂನ್ ಮುಲ್ತಾನಿ ಮಿಟ್ಟಿಯನ್ನು ಒಂದು ಬೌಲ್ ಗೆ ಹಾಕಿಕೊಂಡು ಅದಕ್ಕೆ 2 ಟೀ ಸ್ಪೂನ್ ಟೊಮೆಟೊ ಹಣ್ಣಿನ ರಸ ಹಾಕಿ. ಸ್ವಲ್ಪ ಲಿಂಬೆ ಹಣ್ಣಿನ ರಸ ಹಾಕಿ ಮಿಶ್ರಣ ತಯಾರಿಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದ ಅಂದ ಹೆಚ್ಚಾಗುತ್ತದೆ.