ವಿಫಲವಾಗಿರುವ ವೈವಾಹಿಕ ಸಂಬಂಧವನ್ನು ಮುಂದುವರಿಸುವಂತೆ ತಮ್ಮ ಸಂಗಾತಿಯನ್ನು ಒತ್ತಾಯಿಸುವ ಅಧಿಕಾರ ಪತಿ ಅಥವಾ ಪತ್ನಿ ಇಬ್ಬರಿಗೂ ಇರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಚೇದನವನ್ನು ಪಡೆಯಲು ನಿರಾಕರಿಸುವುದು ಕ್ರೌರ್ಯಕ್ಕೆ ಸಮನಾಗಿದೆ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ. ವಿಚ್ಚೇದಿತ ದಂಪತಿಗಳ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ಈ ಆದೇಶವನ್ನು ಹೊರಡಿಸಿದೆ.
ಮದುವೆಯು ವಿಫಲವಾಗಿದೆ ಎಂಬ ಸತ್ಯವು ಮನವರಿಕೆಯಾದ ಬಳಿಕವೂ ಸಂಗಾತಿಗಳ ಪೈಕಿ ಯಾರೇ ಒಬ್ಬರು ವಿಚ್ಚೇದನವನ್ನು ಪಡೆಯಲು ನಿರಾಕರಿಸುತ್ತಾರೆ ಎಂದರೆ ಅದು ತನ್ನ ಸಂಗಾತಿಯ ಮೇಲಿರುವ ದ್ವೇಷವೇ ಹೊರತು ಮತ್ತೇನೂ ಅಲ್ಲ.
ಸಂಬಂಧವು ಸರಿಪಡಿಸಲು ಸಾಧ್ಯವಾಗದರ ಮಟ್ಟಿಗೆ ಹದಗೆಟ್ಟಿದ್ದರೆ ಕಾನೂನು ಬದ್ಧವಾಗಿ ಸಂಬಂಧವನ್ನು ಮುಂದುವರಿಸುವಂತೆ ಯಾರೂ ಇನ್ನೊಬ್ಬರನ್ನು ಒತ್ತಾಯಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಎ. ಮುಹಮ್ಮದ್ ಮುಸ್ತಾಕ್ ನೇತೃತ್ವದ ವಿಭಾಗೀಯ ಪೀಠವು ತೀರ್ಪನ್ನು ನೀಡಿದೆ.