
ವಿಜಯನಗರ ಜಿಲ್ಲೆ ಹರಪನಹಳ್ಳಿಯ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿನ ಕಾರ್ಣಿಕದ ಬಳಿಕ ಇದೀಗ ಹಾವೇರಿ ಜಿಲ್ಲೆ ಗುತ್ತಲ ಸಮೀಪದ ಹಾವನೂರು ಗ್ರಾಮದಲ್ಲಿ ಗುರುವಾರ ನಡೆದ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ದಲ್ಲಿ ಮತ್ತೊಂದು ದೈವವಾಣಿ ಕೇಳಿಬಂದಿದೆ.
ಹೊನ್ನಪ್ಪ ಬಿಲ್ಲರ ಗೊರವಯ್ಯ ‘ಮುತ್ತಿನ ರಾಶಿ ದುಂಡಗ ಆತಲೇ ಪರಾಕ್’ ಎಂದು ಹೇಳುವ ಮೂಲಕ ಈ ಬಾರಿ ದೇಶವು ಒಗ್ಗಟ್ಟಿನ ಮೂಲಕ ಮುಂದುವರಿಯಲಿದೆ ಎಂಬ ಪರೋಕ್ಷ ಸಂದೇಶ ನೀಡಿದ್ದಾರೆ.
ಫೆಬ್ರವರಿ 18ರ ಇಂದು ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಲ್ಲಿ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ನಡೆಯಲಿದ್ದು, ಅಲ್ಲಿ ಯಾವ ದೈವವಾಣಿ ಹೊರಬೀಳಲಿದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.