alex Certify ಮುಟ್ಟಿನ ಸಮಯದಲ್ಲಿ ಮರೆತು ಕೂಡ ಮಾಡಬೇಡಿ ಈ ಕೆಲಸ, ಹೆಚ್ಚಾಗಬಹುದು ಸಮಸ್ಯೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಟ್ಟಿನ ಸಮಯದಲ್ಲಿ ಮರೆತು ಕೂಡ ಮಾಡಬೇಡಿ ಈ ಕೆಲಸ, ಹೆಚ್ಚಾಗಬಹುದು ಸಮಸ್ಯೆ…..!

ಮುಟ್ಟಿನ ಸಮಯದಲ್ಲಿ ಮಹಿಳೆಯರು ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನಹರಿಸಬೇಕು. ಏಕೆಂದರೆ ಋತುಚಕ್ರದ ವೇಳೆ ಇಡೀ ದೇಹವನ್ನು ಆರೋಗ್ಯವಾಗಿರಿಸಿಕೊಳ್ಳುವುದು ಅವಶ್ಯಕ. ಇಲ್ಲದಿದ್ದರೆ ಅನೇಕ ಸಮಸ್ಯೆಗಳು ಎದುರಾಗಬಹುದು. ಪಿರಿಯಡ್ಸ್ ಸಮಯದಲ್ಲಿ ಯಾವ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು? ಯಾವೆಲ್ಲಾ ಕೆಲಸಗಳನ್ನು ಮಾಡಬಾರದು ಅನ್ನೋದನ್ನು ನೋಡೋಣ.

ಮುಟ್ಟಾದಾಗ ಸಾಮಾನ್ಯವಾಗಿ ಮಹಿಳೆಯರು ನ್ಯಾಪ್ಕಿನ್‌ ಅಥವಾ ಪ್ಯಾಡ್‌ಗಳನ್ನು ಬಳಸುತ್ತಾರೆ. ಅವುಗಳನ್ನು ಎಷ್ಟೆಷ್ಟು ಸಮಯಕ್ಕೆ ಬದಲಾಯಿಸಬೇಕು ಎಂಬುದನ್ನು ತಿಳಿದುಕೊಳ್ಳಿ. ಇಲ್ಲದೇ ಹೋದಲ್ಲಿ ಗಂಭೀರ ಸಮಸ್ಯೆಗಳಾಗುತ್ತವೆ. ಪ್ಯಾಡ್‌ ಅನ್ನು 4 ಗಂಟೆಗಳಿಗಿಂತ ಹೆಚ್ಚು ಕಾಲ ಹಾಕಿಕೊಂಡಿರಬಾರದು. ನಾಲ್ಕು ಗಂಟೆಗಳಿಗೊಮ್ಮೆ ಅದನ್ನು ಬದಲಾಯಿಸಿ. ದೀರ್ಘಕಾಲದವರೆಗೆ ಒಂದೇ ಪ್ಯಾಡ್ ಹಾಕಿಕೊಂಡರೆ ಅದು ರಕ್ತವನ್ನು ಹೀರಿಕೊಳ್ಳುವುದಿಲ್ಲ. ಆದ್ದರಿಂದ ದಿನಕ್ಕೆ 3 ಬಾರಿ ಪ್ಯಾಡ್ ಅನ್ನು ಬದಲಾಯಿಸಿ.

ಋತುಚಕ್ರದ ನೋವಿನಿಂದಾಗಿ ಸುಸ್ತು ಉಂಟಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಅನೇಕ ಮಹಿಳೆಯರು ವ್ಯಾಯಾಮವನ್ನು ಬಿಟ್ಟುಬಿಡುತ್ತಾರೆ. ಆದರೆ ಈ ರೀತಿ ಮಾಡಬಾರದು. ಏಕೆಂದರೆ ವ್ಯಾಯಾಮದ ಮೂಲಕ ನೀವು ತಾಜಾತನವನ್ನು ಅನುಭವಿಸುವಿರಿ. ಜೊತೆಗೆ ಮುಟ್ಟಿನ ನೋವು ಸಹ ಕಡಿಮೆಯಾಗುತ್ತದೆ. ಆದರೆ ನೀವು ಲಘು ವ್ಯಾಯಾಮವನ್ನು ಮಾತ್ರ ಮಾಡಬೇಕು ಎಂಬುದನ್ನು ನೆನಪಿನಲ್ಲಿಡಿ.

ಮುಟ್ಟಾದಾಗ ಕೆಲವರಿಗೆ ಹೊಟ್ಟೆ ಉಬ್ಬರಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಅತಿಯಾಗಿ ಉಪ್ಪು ಸೇವಿಸಬೇಡಿ. ಪೀರಿಯಡ್ಸ್‌ನಲ್ಲಿ ಉಪ್ಪು ಜಾಸ್ತಿ ತಿನ್ನುವುದರಿಂದ ಅನೇಕ ಕಾಯಿಲೆಗಳೂ ಬರುತ್ತವೆ. ಆ ದಿನಗಳಲ್ಲಿ ಉಪ್ಪಿಲ್ಲದ ಊಟ ತಿನ್ನುವುದು ಕೂಡ ಉತ್ತಮ. ಋತುಚಕ್ರದ ವೇಳೆ ದೇಹದಿಂದ ಬಹಳಷ್ಟು ರಕ್ತಸ್ರಾವವಾಗುತ್ತದೆ. ಆದ್ದರಿಂದ ದೇಹಕ್ಕೆ ಹೆಚ್ಚಿನ ಪೋಷಣೆಯ ಅಗತ್ಯವಿರುತ್ತದೆ. ಹಾಗಾಗಿ ಆ ಸಮಯದಲ್ಲಿ ಉತ್ತಮ ಆಹಾರವನ್ನು ಸೇವನೆ ಮಾಡಿ. ಪೋಷಕಾಂಶಗಳುಳ್ಳ ಆಹಾರ ಸೇವನೆ ಸೂಕ್ತ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...