ಮಹಿಳೆಯರು ಋತುಚಕ್ರದ ಸಮಯದಲ್ಲಿ ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಾರೆ. ಕೆಲವರಿಗೆ ವಿಪರೀತ ರಕ್ತಸ್ರಾವ ಕೂಡ ಆಗಬಹುದು. ಸಾಮಾನ್ಯವಾಗಿ ಮುಟ್ಟಿನ ಸಮಯದಲ್ಲಿ ಪ್ಯಾಡ್ ಅಥವಾ ನ್ಯಾಪ್ಕಿನ್ ಮತ್ತು ಕಪ್‌ಗಳನ್ನು ಬಳಸಲಾಗುತ್ತದೆ. ಕಾಲಕಾಲಕ್ಕೆ ಪ್ಯಾಡ್‌ಗಳನ್ನು ಬದಲಾಯಿಸಬೇಕು. ಕಪ್‌ಗಳನ್ನು ಬಳಸುತ್ತಿದ್ದರೆ ಅದನ್ನು ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ ಅದು ಕೂಡ ಸಮಸ್ಯೆಗೆ ಕಾರಣವಾಗಬಹುದು.
ಮುಟ್ಟಿನ ಸಮಯದಲ್ಲಿ ಬಳಸಿದ ಪ್ಯಾಡ್ ಕೊಳಕು ಮತ್ತು ಬಹಳಷ್ಟು ಸೂಕ್ಷ್ಮಜೀವಿಗಳನ್ನು ಹೊಂದಿರುತ್ತದೆ. ಈ ರೋಗಾಣುಗಳು ನಮ್ಮ ದೇಹವನ್ನು ಪ್ರವೇಶಿಸಿದರೆ ಅನಾರೋಗ್ಯಕ್ಕೆ ಕಾರಣವಾಗಬಹುದು. ಆದ್ದರಿಂದ ಪ್ಯಾಡ್ಗಳನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಬಹಳ ಮುಖ್ಯ.
ದಿನಕ್ಕೆ ಎಷ್ಟು ಬಾರಿ ಬದಲಾಯಿಸಬೇಕು?
ಪ್ಯಾಡ್‌ಗಳನ್ನು ದಿನಕ್ಕೆ ಎಷ್ಟು ಬಾರಿ ಬದಲಾಯಿಸಬೇಕು ಎಂಬುದನ್ನು ತಿಳಿದಿರುವುದು ಬಹಳ ಮುಖ್ಯ. ಪ್ರತಿ 3-4 ಗಂಟೆಗಳಿಗೊಮ್ಮೆ ಪ್ಯಾಡ್ ಬದಲಿಸುವುದು ಕಡ್ಡಾಯ. ಭಾರೀ ರಕ್ತಸ್ರಾವವಿದ್ದರೆ ಎರಡು ಗಂಟೆಗಳಿಗೊಮ್ಮೆ ಕೂಡ ಬದಲು ಮಾಡಬೇಕಾಗಬಹುದು.
ಬದಲಾಯಿಸದಿದ್ದರೆ ಏನಾಗುತ್ತದೆ?
ಸಮಯಕ್ಕೆ ಸರಿಯಾಗಿ ಪ್ಯಾಡ್ ಬದಲಾಯಿಸದಿದ್ದರೆ ಅನೇಕ ಸಮಸ್ಯೆಗಳು ಉಂಟಾಗಬಹುದು. ಕೆಟ್ಟ ವಾಸನೆ ಮತ್ತು ಸೋಂಕಿನ ಅಪಾಯವಿರುತ್ತದೆ. ಇದರಿಂದ ಜ್ವರ ಕೂಡ ಬರಬಹುದು. ಚರ್ಮದ ಮೇಲೆ ದದ್ದುಗಳು ಉಂಟಾಗುವ ಸಾಧ್ಯತೆಯೂ ಇರುತ್ತದೆ.
ಪ್ಯಾಡ್ ಧರಿಸುವ ಮುನ್ನ ಕೆಲವು ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಯಾವಾಗಲೂ ಶುದ್ಧ ಕೈಗಳಿಂದ ಪ್ಯಾಡ್ಗಳನ್ನು ಧರಿಸಿ ಮತ್ತು ಬದಲಾಯಿಸಿ. ಪ್ಯಾಡ್ ಅನ್ನು ಚೆನ್ನಾಗಿ ಪೇಪರ್‌ನಲ್ಲಿ ಸುತ್ತಿ ಡಸ್ಟ್‌ಬಿನ್‌ಗೆ ಹಾಕಿ. ಮುಟ್ಟಿನ ಸಮಯದಲ್ಲಿ ಪ್ರತಿದಿನ ಸ್ನಾನ ಮಾಡಬೇಕು ಮತ್ತು ಸಡಿಲವಾದ ಬಟ್ಟೆಗಳನ್ನು ಧರಿಸಿ.