ಹುಡುಗಿಯರ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವೊಂದು ಪ್ರಶ್ನೆಗಳು ಹುಡುಗರಲ್ಲಿ ಮನೆ ಮಾಡಿರುತ್ತವೆ. ವಿಶೇಷವಾಗಿ ಪಿರಿಯಡ್ಸ್ ವಿಚಾರ. ಇದ್ರ ಬಗ್ಗೆ ಅವರಲ್ಲಿ ಅನೇಕ ಪ್ರಶ್ನೆಗಳು ಹುಟ್ಟಿಕೊಂಡಿರುತ್ತವೆ. ಆದ್ರೆ ಪ್ರೇಯಸಿ ಮುಂದೆ ಈ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಲು ಹೆಣಗಾಡ್ತಾರೆ. ಸುತ್ತಿಬಳಸಿ ಕೆಲ ಪ್ರಶ್ನೆಗಳಿಗೆ ಉತ್ತರ ಕಂಡಕೊಳ್ಳುವವರು ಕೆಲವರಾದ್ರೆ ಮತ್ತೆ ಕೆಲವರ ಪ್ರಶ್ನೆ ಪ್ರಶ್ನೆಯಾಗೆ ಇರುತ್ತದೆ.
ಸಾಮಾನ್ಯವಾಗಿ ಹುಡುಗರ ಮನಸ್ಸಿನಲ್ಲಿ ಮನೆ ಮಾಡುವ ಪ್ರಶ್ನೆಗಳು ಇಲ್ಲಿವೆ:
ಈ ದಿನಗಳಲ್ಲಿ ಹಾಸಿಗೆಯಿಂದ ನೀನು ಹೇಗೆ ಏಳ್ತೀಯಾ? ಇವಳ ಶರೀರದಿಂದ ಇಷ್ಟಲ್ಲ ಬ್ಲಡ್ ಬರಲು ಹೇಗೆ ಸಾಧ್ಯ?
ಹುಡುಗಿಯರು ಸ್ನಾನ ಮಾಡುವ ವೇಳೆ ಮತ್ತಷ್ಟು ಬ್ಲಡ್ ಹೋಗಬಹುದು ಎಂದೂ ಯೋಚಿಸುವವರಿದ್ದಾರೆ.
ಮುಟ್ಟಿನ ವೇಳೆ ಕೆಲ ಹುಡುಗಿಯರು ಚಾಕಲೇಟ್ ತಿನ್ನಲು ಇಷ್ಟಪಡ್ತಾರೆ. ಈ ಸಮಯದಲ್ಲಿ ಚಾಕಲೇಟ್ ತಿನ್ನೋದು ಆರೋಗ್ಯಕ್ಕೆ ಒಳ್ಳೆಯದಾ ಎಂದು ಕೆಲ ಹುಡುಗರು ಯೋಚನೆ ಮಾಡ್ತಾರೆ.
ಪಿರಿಯಡ್ಸ್ ಆಗಿದೆ ಅಂತಾ ಹೇಗೆ ಗೊತ್ತಾಗುತ್ತೆ? ಬಹುಷಃ ಹುಡುಗಿಯರು ಈ ಬಗ್ಗೆ ಯಾವಾಗ್ಲೂ ಹುಡುಗಿಯರು ಯೋಚನೆ ಮಾಡ್ತಾನೆ ಇರಬಹುದು ಎಂದು ತಲೆಕೆಡಿಸಿಕೊಳ್ಳುತ್ತಾರೆ ಹುಡುಗರು.
ಈ ದಿನಗಳಲ್ಲಿ ಅವರು ಹೇಗೆ ಕೆಲಸ ಮಾಡ್ತಾರೆ? ಸಂಬಂಧ ಹೇಗೆ ಬೆಳೆಸ್ತಾರೆ? ರಾತ್ರಿ ಅಷ್ಟು ಸಮಯ ಹೇಗೆ ಮಲಗಿರ್ತಾರೆ ಎಂಬ ಪ್ರಶ್ನೆ ಹುಡುಗರನ್ನು ಕಾಡುತ್ತದೆ.