ಸಾಮಾನ್ಯವಾಗಿ ಎಲ್ಲಾ ಮಹಿಳೆಯರೂ ಮುಟ್ಟಿನ ನೋವಿನಿಂದ ಹೈರಾಣಾಗುತ್ತಾರೆ. ಪ್ರತಿ ತಿಂಗಳು ರುತುಸ್ರಾವದ ಮೂರು ದಿನಗಳ ಕಾಲ ಕಾಡುವ ನೋವನ್ನು ತಡೆಯಲಾಗದೆ ಒದ್ದಾಡುತ್ತಾರೆ. ಆ ಸಮಯದಲ್ಲಿ ಸಿಹಿ ತಿಂದರೆ ನೋವು ಕಡಿಮೆಯಾಗತ್ತೆ ಅನ್ನೋ ನಂಬಿಕೆ ಇದೆ.
ಆದ್ರೆ ಅದರಿಂದ ದುಷ್ಪರಿಣಾಮಗಳ ಅಪಾಯವೂ ಇದೆ. ನೋವು ಇನ್ನೂ ಜಾಸ್ತಿಯಾಗಬಹುದು, ಅಥವಾ ಮುಖದಲ್ಲಿ ಮೊಡವೆಗಳು ಏಳಬಹದು.
ಆದರೆ ಕೆಲವು ವಿಶೇಷವಾದ ಕೇಕ್, ಬ್ರೌನೀಸ್ ಗಳಲ್ಲಿ ರಿಫೈನ್ಡ್ ಶುಗರ್ ಇರುವುದಿಲ್ಲ, ಬದಲಾಗಿ ಹೇರಳವಾದ ಪೋಷಕಾಂಶಗಳಿರುತ್ತದೆ. ಇದು ನಿಮ್ಮ ನಾಲಿಗೆಗೂ ರುಚಿಕರವಾಗಿರುತ್ತದೆ, ಆರೋಗ್ಯಕ್ಕೂ ಒಳ್ಳೆಯದು. ಪ್ರತಿ ತಿಂಗಳು ರುತುಸ್ರಾವದ ಸಮಯದಲ್ಲಿ ಬ್ರೌನೀಸ್ ಸವಿದರೆ ಮಹಿಳೆಯರಿಗೆ ಆರಾಮವಾಗುತ್ತದೆ.
ರುತುಸ್ರಾವಕ್ಕೂ ಆಹಾರಕ್ಕೂ ಯಾವ ರೀತಿಯ ಸಂಬಂಧವಿದೆ? ಮುಟ್ಟಿನ ಸಂದರ್ಭದಲ್ಲಿ ಯಾವ್ಯಾವ ಪೋಷಕಾಂಶಗಳು ಹಾಗೂ ಖನಿಜಾಂಶಗಳನ್ನು ಮಹಿಳೆಯರು ಸೇವಿಸಬಾರದು ಎಂಬುದನ್ನೆಲ್ಲ ತಿಳಿದು ತಯಾರಿಸಲಾದ ಈ ಬ್ರೌನೀಸ್ ಆರೋಗ್ಯದಾಯಕವಾಗಿದೆ.