alex Certify ಮುಟ್ಟಿಗೆ ಸಂಬಂಧಿಸಿದ ಈ ವಿಷಯಗಳು ನಿಜವೆಂದು ನಂಬಿದ್ದಾರೆ ಜನ, ಆದರೆ ಇದು ಕೇವಲ ಅಸತ್ಯ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಟ್ಟಿಗೆ ಸಂಬಂಧಿಸಿದ ಈ ವಿಷಯಗಳು ನಿಜವೆಂದು ನಂಬಿದ್ದಾರೆ ಜನ, ಆದರೆ ಇದು ಕೇವಲ ಅಸತ್ಯ……!

ಮುಟ್ಟು ಮಹಿಳೆಯರ ಜೀವನದ ಒಂದು ಪ್ರಮುಖ ಅಂಶವಾಗಿದೆ.  ಪ್ರತಿ ತಿಂಗಳು ಸ್ತ್ರೀಯರು ಋತುಮತಿಯಾಗುತ್ತಾರೆ. ಇದು ಜೈವಿಕ ಪ್ರಕ್ರಿಯೆಯಾಗಿದ್ದರೂ, ಪ್ರಪಂಚದ ಅನೇಕ ಭಾಗಗಳಲ್ಲಿ  ಮುಟ್ಟಿನ ನಿಷೇಧ ರೂಢಿಯಲ್ಲಿದೆ. ಈ ಸಮಯದಲ್ಲಿ ಮಹಿಳೆಯರು ಕೂದಲು ತೊಳೆಯುವಂತಿಲ್ಲ, ಉಪ್ಪಿನಕಾಯಿ ಮುಟ್ಟುವಂತಿಲ್ಲ. ದೇವಸ್ಥಾನಗಳಿಗೆ ಹೋಗುವುದು, ದೇವರಿಗೆ ಪ್ರಾರ್ಥನೆ ಸಲ್ಲಿಸುವುದು ಇವೆಲ್ಲ ನಿಷಿದ್ಧ ಎನ್ನಲಾಗುತ್ತದೆ.

ಇಷ್ಟೇ ಅಲ್ಲ, ಪಿರಿಯಡ್ಸ್‌ಗೆ ಸಂಬಂಧಿಸಿದ ಅನೇಕ ವಿಷಯಗಳ ಆಧಾರದ ಮೇಲೆ ಇಂದಿಗೂ ಮಹಿಳೆಯರನ್ನು ತಿರಸ್ಕಾರ ಮಾಡಲಾಗುತ್ತದೆ. ಮುಟ್ಟಿಗೆ ಸಂಬಂಧಿಸಿದ ಕೆಲವೊಂದು ಅಸತ್ಯಗಳನ್ನು ತಿಳಿಯೋಣ. ಅವುಗಳನ್ನು ಜನರು ಈಗಲೂ ನಿಜವೆಂದು ನಂಬುತ್ತಾರೆ.

ಮುಟ್ಟಿನ ರಕ್ತ ಅಶುದ್ಧ: ಮುಟ್ಟಿನ ಸಮಯದಲ್ಲಿ ಮಹಿಳೆಯರ ದೇಹದಿಂದ ಹೊರಬರುವ ರಕ್ತವು ಅಶುದ್ಧ ಮತ್ತು ಕೊಳಕು ಎಂಬುದನ್ನು ಅನೇಕ ಬಾರಿ ಕೇಳಿರಬಹುದು. ಆದರೆ ಇದು ಸತ್ಯವಲ್ಲ. ವಾಸ್ತವವಾಗಿ ಅನೇಕರಿಗೆ ಋತುಚಕ್ರವು ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿ ಒಂದು ಪ್ರಮುಖ ಪ್ರಕ್ರಿಯೆಯಾಗಿದೆ ಎಂಬುದು ತಿಳಿದಿಲ್ಲ. ಇದು ಗರ್ಭಧಾರಣೆಗೆ ಅವರನ್ನು ಸಿದ್ಧಪಡಿಸುವ ಕೆಲಸ ಮಾಡುತ್ತದೆ.

ಮುಟ್ಟು ತಡವಾದರೆ ಗರ್ಭಧಾರಣೆ: ಮುಟ್ಟು ನಾಲ್ಕಾರು ದಿನ ತಡವಾದರೂ ಮಹಿಳೆಯರು ತಾವು ಗರ್ಭಿಣಿ ಎಂದು ಭಾವಿಸುತ್ತಾರೆ. ಕೆಲವೊಮ್ಮೆ ಇದಕ್ಕೆ ಬೇರೆ ಬೇರೆ ಕಾರಣಗಳಿರುತ್ತವೆ. ಹೆಚ್ಚುವರಿ ತೂಕ, ಅನಾರೋಗ್ಯಕರ ಆಹಾರ ಸೇವನೆ, ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್, ಯಾವುದೇ ಇತರ ಕಾಯಿಲೆ ಅಥವಾ ಒತ್ತಡ, ಹಾರ್ಮೋನ್ ಅಸಮತೋಲನದಿಂದಲೂ ಪಿರಿಯಡ್ಸ್ ಮಿಸ್ ಆಗಬಹುದು.

ಪಿರಿಯಡ್ಸ್ ಸಮಯದಲ್ಲಿ ವ್ಯಾಯಾಮ ಮಾಡಬಾರದು: ಮುಟ್ಟಿನ ಸಮಯದಲ್ಲಿ ಮಹಿಳೆಯರು ಯಾವುದೇ ಭಾರವಾದ ಕೆಲಸ ಅಥವಾ ವ್ಯಾಯಾಮವನ್ನು ಮಾಡಬಾರದು ಎಂದು ಹಲವರು ನಂಬುತ್ತಾರೆ. ಆದರೆ ಪಿರಿಯಡ್ಸ್ ಸಮಯದಲ್ಲಿ ವ್ಯಾಯಾಮ ಮಾಡುವುದು ನಿಮಗೆ ಪ್ರಯೋಜನಕಾರಿ. ಇದು ನಿಮಗೆ ನೋವಿನಿಂದ ಪರಿಹಾರ ನೀಡುವುದಲ್ಲದೆ, ದೇಹದ ಸೆಳೆತವನ್ನು ಸಹ ತೆಗೆದುಹಾಕುತ್ತದೆ.

ಮುಟ್ಟಿನ ಸಂದರ್ಭದಲ್ಲಿ ಗರ್ಭಿಣಿಯಾಗುವುದಿಲ್ಲ: ಮುಟ್ಟಿನ ಸಮಯದಲ್ಲಿಯೂ ಮಹಿಳೆಯರು ಗರ್ಭಿಣಿಯಾಗಬಹುದು. ಏಕೆಂದರೆ ಋತುಚಕ್ರವು 28-30 ದಿನಗಳಲ್ಲಿ ಪುನರಾವರ್ತನೆಯಾಗುತ್ತದೆ. ಮಹಿಳೆಯ ಋತುಚಕ್ರ ಚಿಕ್ಕದಾಗಿದ್ದರೆ 6 ದಿನಗಳ ನಂತರ ಲೈಂಗಿಕವಾಗಿ ಸಕ್ರಿಯರಾಗಬಹುದು. ಇದರ ನಂತರ ಅಂಡೋತ್ಪತ್ತಿ ಪ್ರಕ್ರಿಯೆಯು ಸಂಭವಿಸಬಹುದು. ಋತುಚಕ್ರದ ನಂತರವೂ ವೀರ್ಯವು ಸಕ್ರಿಯವಾಗಿರಲು ಇದು ಕಾರಣವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...