ಎರಡು ಖಾಸಗಿ ಬಸ್ ಗಳು ಮುಖಾಮುಖಿಯಾಗಿದ್ದು, ಈ ಅಪಘಾತದ ದೃಶ್ಯ ಬಸ್ ನಲ್ಲಿದ್ದ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಪಘಾತವಾದ ರಭಸಕ್ಕೆ ಚಾಲಕ ತನ್ನ ಸೀಟಿನಿಂದ ಹಾರಿ ಪಕ್ಕಕ್ಕೆ ಬಿದ್ದಿದ್ದು, ಇದು ನೋಡುಗರನ್ನು ಬೆಚ್ಚಿಬೀಳಿಸುವಂತಿದೆ.
ಈ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದಿದ್ದು, ಒಂದು ಖಾಸಗಿ ಬಸ್ ಮೂವತ್ತು ಮಂದಿ ಪ್ರಯಾಣಿಕರೊಂದಿಗೆ ಎಡಪ್ಪಾಡಿಯಿಂದ ಬರುತ್ತಿದ್ದರೆ ಮತ್ತೊಂದು ಬಸ್ 55 ಮಂದಿ ವಿದ್ಯಾರ್ಥಿಗಳೊಂದಿಗೆ ತಿರುಚನಗೂಡೆ ಕಡೆಯಿಂದ ಬರುತ್ತಿತ್ತು.
ಈ ಎರಡೂ ಬಸ್ ಗಳು ಕೋಝಿಪನ್ನಿ ಸಮೀಪ ಎಡಪ್ಪಾಡಿ – ಸಂಕರಿ ಹೈವೇನಲ್ಲಿ ಪರಸ್ಪರ ಡಿಕ್ಕಿ ಹೊಡೆದಿವೆ. ಇದರ ಪರಿಣಾಮ ಒಂದು ಬಸ್ ಚಾಲಕ ಹಾರಿ ಬಿದ್ದಿದ್ದು, ಅಪಘಾತದಲ್ಲಿ ಮೂವತ್ತಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.