ಮಹಿಳೆಯರಿಗಿಂತ ಪುರುಷರ ಚರ್ಮ ದಪ್ಪವಾಗಿ ಹಾಗೂ ಬಲವಾಗಿರುತ್ತದೆ. ಇದ್ರಿಂದ ಅವರ ಮುಖ ಬೇಗ ವಯಸ್ಸಾದಂತೆ ಕಾಣುವುದಿಲ್ಲ. ಆದ್ರೂ ನಿಯಮಿತವಾಗಿ ಮುಖವನ್ನು ಸ್ವಚ್ಛಗೊಳಿಸಿ ಚರ್ಮ ಆರೋಗ್ಯವಾಗಿಡಬೇಕು.
ಮೊದಲು ಚರ್ಮದ ಪ್ರಕಾರವನ್ನು ನೋಡಿಕೊಳ್ಳಬೇಕು. ಕೆಲವರ ಚರ್ಮ ಎಣ್ಣೆಯುಕ್ತವಾಗಿದ್ದರೆ ಮತ್ತೆ ಕೆಲವರ ಚರ್ಮ ಒಣ ಚರ್ಮವಾಗಿರುತ್ತದೆ. ಇನ್ನೂ ಕೆಲವರು ಮಿಶ್ರ ಗುಣ ಹೊಂದಿರುತ್ತಾರೆ. ಪೇಪರ್ ಮುಖಕ್ಕಿಟ್ಟು ಚರ್ಮದ ಪ್ರಕಾರ ತಿಳಿದುಕೊಳ್ಳಬೇಕು.
ಚರ್ಮಕ್ಕೆ ಸೂಕ್ತವಾಗುವ ಕ್ರೀಂ ಬಳಸಬೇಕು. ಒಣ ಚರ್ಮದವರು ಆಯ್ಲಿ ಚರ್ಮಕ್ಕೆ ಹಚ್ಚುವ ಕ್ರೀಂ ಹಚ್ಚೋದು ಒಳ್ಳೆಯದಲ್ಲ. ಹಾಗಾಗಿ ನಿಮ್ಮ ಚರ್ಮಕ್ಕೆ ಸೂಕ್ತವೆನಿಸುವ ಕ್ರೀಂ ಬಳಸಬೇಕು.
ದಿನದಲ್ಲಿ ಎರಡು ಬಾರಿ ಮುಖವನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಇದ್ರಿಂದ ಮುಖಕ್ಕೆ ಅಂಟಿರುವ ಧೂಳು ಸ್ವಚ್ಛವಾಗುತ್ತದೆ. ಬ್ಲ್ಯಾಕ್ಹೆಡ್ಸ್ ಕಾಡುವುದಿಲ್ಲ.
ಹಾಗೆ ಚರ್ಮಕ್ಕೆ ಎಕ್ಸ್ಫೋಲಿಯೇಶನ್ ಹಚ್ಚುವುದ್ರಿಂದ ಚರ್ಮ ಮೃದುವಾಗಿ, ನಯವಾಗುತ್ತದೆ.
ಚರ್ಮ ತೇವಾಂಶದಿಂದ ಕೂಡಿದ್ದರೆ ಒಳ್ಳೆಯದು. ಹೆಚ್ಚು ಹೆಚ್ಚು ನೀರು ಕುಡಿಯುವ ಜೊತೆಗೆ ಹಾಲಿನ ಕೆನೆ ಅಥವಾ ಲೋಷನ್ ಬಳಸಿ.