ತೆಂಗಿನ ಎಣ್ಣೆಯ ಪ್ರಯೋಜನಗಳ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಸೌಂದರ್ಯ ವರ್ಧನೆಗೂ ತೆಂಗಿನ ಎಣ್ಣೆ ಹೇಳಿ ಮಾಡಿಸಿದಂತಹ ಉತ್ಪನ್ನ. ವಯಸ್ಸು 40 ದಾಟುತ್ತಿದ್ದಂತೆ ಮುಖದಲ್ಲಿ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. ತೆಂಗಿನ ಎಣ್ಣೆ ಬಳಸುವುದರಿಂದ ಸುಕ್ಕುಗಳನ್ನು ನಿವಾರಿಸಬಹುದು. ಇಷ್ಟು ಮಾತ್ರವಲ್ಲ ತೆಂಗಿನ ಎಣ್ಣೆಯಿಂದ ಇನ್ನೂ ಹತ್ತಾರು ಪ್ರಯೋಜನಗಳಿವೆ.
ತೆಂಗಿನ ಎಣ್ಣೆಯಲ್ಲಿ ಕೊಬ್ಬಿನಾಮ್ಲಗಳು, ವಿಟಮಿನ್-ಇ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಇದು ನಿಮ್ಮ ಮುಖಕ್ಕೆ ಸೀರಮ್‌ನಂತೆ ಕೆಲಸ ಮಾಡುತ್ತದೆ. ತೆಂಗಿನೆಣ್ಣೆಯಿಂದ ಮುಖಕ್ಕೆ ಚೆನ್ನಾಗಿ ಮಸಾಜ್ ಮಾಡಿಕೊಳ್ಳುವುದರಿಂದ ಮುಖದ ಹೊಳಪು ಹೆಚ್ಚಾಗುತ್ತದೆ. ಕಾರಣ ತೆಂಗಿನ ಎಣ್ಣೆಯಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ರಾತ್ರಿ ಮಲಗುವ ಮುನ್ನ ತೆಂಗಿನ ಎಣ್ಣೆಯನ್ನು ಮುಖಕ್ಕೆ ಹಚ್ಚಿಕೊಳ್ಳಬೇಕು.
ಮುಖವು ಸುಕ್ಕಾಗಿದ್ದರೆ ತೆಂಗಿನ ಎಣ್ಣೆಯನ್ನು ಹಚ್ಚಿಕೊಳ್ಳಿ. ನಿಯಮಿತವಾಗಿ ಇದನ್ನು ಬಳಸುವುದರಿಂದ ಮುಖದ ಸುಕ್ಕು ಮಾಯವಾಗುತ್ತದೆ. ಹವಾಮಾನ ಬದಲಾವಣೆಯಿಂದ ಮುಖದ ಚರ್ಮ ಒಣಗಿದಂತಾಗುತ್ತದೆ. ಮುಖದ ಶುಷ್ಕತೆಯನ್ನು ತೊಡೆದುಹಾಕಲು ನೀವು ತೆಂಗಿನ ಎಣ್ಣೆಯನ್ನು ಹಚ್ಚಿಕೊಳ್ಳಿ.
ಇದರಿಂದ ಮುಖ ತೇವಾಂಶಯುಕ್ತವಾಗಿರುತ್ತದೆ. ಮಾಲಿನ್ಯ ಮತ್ತು ಆಹಾರದ ದೋಷಗಳಿಂದ ಮುಖದ ಮೇಲೆ ವಿವಿಧ ರೀತಿಯ ಕಲೆಗಳು ಉಂಟಾಗುತ್ತವೆ. ಪ್ರತಿದಿನ ರಾತ್ರಿ ಮಲಗುವ ಮುನ್ನ ತೆಂಗಿನೆಣ್ಣೆಯಿಂದ ಮುಖಕ್ಕೆ ಮಸಾಜ್ ಮಾಡಿ. ಸುಮಾರು 5 ರಿಂದ 10 ನಿಮಿಷಗಳ ಕಾಲ ಮಸಾಜ್ ಮಾಡಿದ ನಂತರ ಹಾಗೇ ಬಿಡಿ. ಕಲೆಗಳು ಮಾಯವಾಗುತ್ತವೆ.