ಚಿಕ್ಕ ವಯಸ್ಸಿನಲ್ಲಿಯೇ ತಲೆಗೂದಲು ಬೆಳ್ಳಗಾಗೋದನ್ನು ಕೇಳಿರ್ತೀರಾ, ನೋಡಿರ್ತೀರಾ. ತಲೆಗೂದಲು ಬೆಳ್ಳಗಾದ್ರೆ ನಮಗೆ ಟೆನ್ಷನ್ ಶುರುವಾಗುತ್ತದೆ. ಅಂಥದ್ರಲ್ಲಿ ಮುಖದ ಮೇಲೇನಾದ್ರೂ ಬಿಳಿ ಕೂದಲು ಬಂದುಬಿಟ್ರೆ ಒತ್ತಡ ಮತ್ತಷ್ಟು ಹೆಚ್ಚಾಗುವುದರಲ್ಲಿ ಅನುಮಾನವೇ ಇಲ್ಲ.
ಮೆಲನಿನ್ ಕೊರತೆಯಿಂದಾಗಿ ಮುಖದ ಕೂದಲು ಬಿಳಿಯಾಗುತ್ತದೆ. ದೇಹದಲ್ಲಿನ ಹಾರ್ಮೋನುಗಳ ಬದಲಾವಣೆಗಳು ಸಹ ಇದಕ್ಕೆ ಕಾರಣವಾಗಿರಬಹುದು. ಅನೇಕ ಮಹಿಳೆಯರು ಇದರಿಂದ ಖಿನ್ನತೆಗೆ ಒಳಗಾಗುತ್ತಾರೆ. ಆದರೆ ಅಷ್ಟೊಂದು ಟೆನ್ಷನ್ ಮಾಡಿಕೊಳ್ಳುವ ಅಗತ್ಯವಿಲ್ಲ. ಮುಖದ ಬಿಳಿ ಕೂದಲನ್ನು ತೆಗೆದು ಹಾಕಲು ಕೆಲವೊಂದು ಪರಿಣಾಮಕಾರಿ ಮಾರ್ಗಗಳಿವೆ.
ಜೇನುತುಪ್ಪ : ಜೇನುತುಪ್ಪ ಚರ್ಮದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಜೇನುತುಪ್ಪಕ್ಕೆ ಸ್ವಲ್ಪ ಸಕ್ಕರೆ ಬೆರೆಸಿ ಕುದಿಸಿ. ನಂತರ ಅದ್ಕಕೆ ನಿಂಬೆ ರಸವನ್ನು ಮಿಶ್ರಣ ಮಾಡಿ. ಈ ಮಿಶ್ರಣದ ಸಹಾಯದಿಂದ ನೀವು ಮುಖದ ಮೇಲಿನ ಅನಗತ್ಯ ಬಿಳಿ ಕೂದಲನ್ನು ತೆಗೆದು ಹಾಕಬಹುದು.
ಫೇಶಿಯಲ್ ರೇಜರ್: ಮಾರುಕಟ್ಟೆಯಲ್ಲಿ ಹಲವು ಬಗೆಯ ಫೇಶಿಯಲ್ ರೇಜರ್‌ಗಳು ಲಭ್ಯವಿವೆ. ಅದರ ಸಹಾಯದಿಂದ ಮುಖದಲ್ಲಿರುವ ಬೇಡದ ಬಿಳಿ ಕೂದಲನ್ನು ತೆಗೆದು ಹಾಕಬಹುದು. ಮುಖವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಮುಖ ಒಣಗದಂತೆ ನೋಡಿಕೊಳ್ಳಿ, ಇಲ್ಲದಿದ್ದರೆ ದದ್ದುಗಳು ಬರಬಹುದು ಅಥವಾ ಚರ್ಮವು ಸಿಪ್ಪೆ ಸುಲಿಯಬಹುದು. ಸ್ವಲ್ಪ ಕೊಬ್ಬರಿ ಎಣ್ಣೆ ಅಥವಾ ಮಾಯಿಶ್ಚರೈಸರ್ ಹಚ್ಚಿಕೊಂಡು ಮುಖದ ಮೇಲೆ ರೇಜರ್ ಚಲಾಯಿಸಿ.
ಲೇಸರ್ ಚಿಕಿತ್ಸೆ : ಲೇಸರ್ ಚಿಕಿತ್ಸೆ ಮೂಲಕವೂ ಮುಖದ ಮೇಲಿನ ಬಿಳಿ ಕೂದಲನ್ನು ತೆಗೆದುಹಾಕಬಹುದು. ಈ ಪ್ರಕ್ರಿಯೆಯಲ್ಲಿ ನಿಮಗೆ ನೋವು ಕೂಡ ಇರುವುದಿಲ್ಲ. ಆದರೆ ಇದನ್ನು ವೃತ್ತಿಪರ ಪಾರ್ಲರ್‌ಗಳಲ್ಲಿ ಅಥವಾ ತಜ್ಞ ವೈದ್ಯರ ಬಳಿ ಮಾತ್ರ ಮಾಡಿಸಬೇಕು.
ಅಪ್ಲಿಕೇಟರ್: ಅಪ್ಲಿಕೇಟರ್ ಸಹಾಯದಿಂದ ಮುಖದ ಮೇಲಿರುವ ಬೇಡದ ಕೂದಲನ್ನು ತೆಗೆದು ಹಾಕಬಹುದು. ಈ ಪ್ರಕ್ರಿಯೆಯಲ್ಲಿ ನೋವಾಗುವುದಿಲ್ಲ.
ಥ್ರೆಡಿಂಗ್ : ಇದೊಂದು ಸಾಮಾನ್ಯ ಪ್ರಕ್ರಿಯೆ. ಬ್ಯೂಟಿ ಪಾರ್ಲರ್‌ಗಳಲ್ಲಿ ದಾರದ ಸಹಾಯದಿಂದ ಮುಖದ ಮೇಲಿರುವ ಬೇಡದ ಕೂದಲನ್ನು ತೆಗೆದು ಹಾಕುತ್ತಾರೆ.