ಮೇಕಪ್ ಮಾಡುವ ಮುನ್ನ ಐಸ್ ನಿಂದ ಮುಖ ತಿಕ್ಕಿಕೊಳ್ಳುವುದರಿಂದ ಬಹಳ ಹೊತ್ತು ಸೌಂದರ್ಯ ಹಾಳಾಗದೆ ಉಳಿಯುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ. ಆ ಐಸ್ ಮಸಾಜ್ ಹೇಗೆ ಮಾಡುವುದು ತಿಳಿಯೋಣ.
ಐಸ್, ಕೂಲಿಂಗ್ ಏಜೆಂಟ್ ನಂತೆ ಕೆಲಸ ಮಾಡುತ್ತದೆ. ಹಾಗಾಗಿ ನಾಲ್ಕರಿಂದ ಐದು ಐಸ್ ಕ್ಯೂಬನ್ನು ಮೃದುವಾದ ಕಾಟನ್ ಬಟ್ಟೆಯಲ್ಲಿಟ್ಟು ಅಥವಾ ಹ್ಯಾಂಡ್ ಕರ್ಚಿಫ್ ಬಳಸಿ ಮುಖದ ಮೇಲಿಡಿ. ವೃತ್ತಾಕಾರದಲ್ಲಿ ಎರಡು ನಿಮಿಷ ಮಸಾಜ್ ಮಾಡುವುದು ಒಳ್ಳೆಯದು.
ಹಣೆ, ಕೆನ್ನೆ, ಮೂಗು, ಗಲ್ಲ ಮತ್ತು ತುಟಿಯ ಸುತ್ತ ಪುನರಾವರ್ತಿಸಿ. ಮಂಜುಗಡ್ಡೆ ಚರ್ಮದ ಒಳಭಾಗದ ರಕ್ತ ಹರಿಯುವಿಕೆಗೆ ನೆರವು ನೀಡುತ್ತದೆ. ಐಸ್ ಇಟ್ಟ ಭಾಗ ಶೀತ ಚಿಕಿತ್ಸೆಗೆ ಸ್ಪಂದಿಸುತ್ತದೆ ಹಾಗೂ ರಕ್ತದ ಪರಿಚಲನೆಯನ್ನು ಸುಧಾರಿಸುತ್ತದೆ.
ಎಲ್ಲಾ ರೀತಿಯ ನೋವು, ಉರಿಯೂತ ತಡೆಯಲು ಇದು ಸಹಕಾರಿ. ಬಿಸಿಯ ದದ್ದುಗಳಿಗೆ ಕೂಡ ಇದು ಉತ್ತಮವಾದುದು. ಚರ್ಮದ ಮೇಲಿನ ಅಲರ್ಜಿಯ ಪ್ರತಿಕ್ರಿಯೆಗಳಿಗೆ ಕೂಡಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಸನ್ ಬರ್ನ್ ನಿವಾರಣೆಗೆ ಅಲೋವೇರಾ ಮತ್ತು ಐಸ್ಕ್ಯೂಬ್ ಉತ್ತಮ ಫಲಿತಾಂಶ ನೀಡುತ್ತದೆ. ಎಣ್ಣೆ ಕಲೆ, ಗುಳ್ಳೆ ಮತ್ತು ಮೊಡವೆಗಳನ್ನೂ ಕಡಿಮೆ ಮಾಡುತ್ತದೆ.