ಓಟ್ಸ್ ಅತ್ಯಂತ ಆರೋಗ್ಯಕರ ಆಹಾರ ಅನ್ನೋದು ನಮಗೆಲ್ಲ ಗೊತ್ತಿದೆ. ಓಟ್ಸ್, ಗ್ಲುಟನ್ ಮುಕ್ತವಾಗಿರುವುದು ವಿಶೇಷ. ಅದಕ್ಕಾಗಿಯೇ ತೂಕ ಇಳಿಸಲು ಜನರು ತಮ್ಮ ಆಹಾರದಲ್ಲಿ ಓಟ್ಸ್ ಅನ್ನು ಖಂಡಿತವಾಗಿ ಸೇರಿಸುತ್ತಾರೆ. ಇದರ ಹೊರತಾಗಿ ಓಟ್ಸ್ ಅಂತಹ ಅನೇಕ ಗುಣಗಳಿಂದ ಸಮೃದ್ಧವಾಗಿದೆ.
ನಿಮಗೆ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಓಟ್ಸ್ ಸೌಂದರ್ಯವರ್ಧಕವೂ ಹೌದು. ಓಟ್ಸ್ ಫೇಸ್ ಮಾಸ್ಕ್ ನಮ್ಮ ಮುಖದ ಚೆಲುವನ್ನು ದುಪ್ಪಟ್ಟು ಮಾಡುತ್ತದೆ.
ಓಟ್ಸ್ ಚರ್ಮವನ್ನು ಎಕ್ಸ್‌ಫೋಲಿಯೇಟ್ ಮಾಡಲು ಸಹಾಯ ಮಾಡುತ್ತದೆ. ತ್ವಚೆಯಿಂದ ಸತ್ತ ಚರ್ಮವನ್ನು ತೆಗೆದುಹಾಕುತ್ತದೆ. ಓಟ್ಸ್ ಬಳಸುವುದರಿಂದ ವೈಟ್ ಹೆಡ್‌ಗಳಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಮೊಡವೆಗಳಿಗೂ ಇದರಿಂದ ಪರಿಹಾರ ಸಿಗುತ್ತದೆ. ಆದ್ದರಿಂದ ಓಟ್ಸ್ ಫೇಸ್ ಮಾಸ್ಕ್ ಮಾಡುವ ವಿಧಾನವನ್ನು ನೋಡೋಣ.
ಓಟ್ಸ್ ಫೇಸ್ ಮಾಸ್ಕ್ ಮಾಡಲು ಬೇಕಾಗುವ ಸಾಮಾಗ್ರಿಗಳು: ಓಟ್ ಮೀಲ್ ಪುಡಿ 1 ಟೀಸ್ಪೂನ್, ಜೇನುತುಪ್ಪ 2 ಟೀಸ್ಪೂನ್
ಓಟ್ಸ್ ಫೇಸ್ ಮಾಸ್ಕ್ ಮಾಡುವ ವಿಧಾನ: ಓಟ್ಸ್ ಫೇಸ್ ಮಾಸ್ಕ್ ಮಾಡಲು ಮೊದಲು ಓಟ್ ಮೀಲ್ ತೆಗೆದುಕೊಳ್ಳಿ. ಅದನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಂಡು ಪುಡಿ ಮಾಡಿಕೊಳ್ಳಿ. ಒಂದು ಬೌಲ್‌ನಲ್ಲಿ 1 ಚಮಚ ಓಟ್ ಮೀಲ್ ಪುಡಿ ಮತ್ತು 2 ಚಮಚ ಜೇನುತುಪ್ಪವನ್ನು ಸೇರಿಸಿ.
ನಂತರ ಈ ಎರಡೂ ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಓಟ್ ಫೇಸ್ ಮಾಸ್ಕ್ ಸಿದ್ಧವಾಗುತ್ತದೆ. ಓಟ್ಸ್ ಫೇಸ್ ಮಾಸ್ಕ್ ಅನ್ನು ಅನ್ವಯಿಸುವ ಮೊದಲು ಮುಖವನ್ನು ತೊಳೆಯಿರಿ. ಮುಖವನ್ನು ಒರೆಸಿಕೊಂಡು ಮಾಸ್ಕ್ ಅನ್ನು ವೈಟ್ ಹೆಡ್ಸ್ ಇರುವ ಜಾಗಕ್ಕೆ ಹಚ್ಚಿಕೊಳ್ಳಿ. ನಂತರ ಅದನ್ನು ಸಂಪೂರ್ಣವಾಗಿ ಒಣಗಲು ಬಿಡಿ. ಒಣಗಿದ ಬಳಿಕ ಶುದ್ಧ ನೀರಿನಿಂದ ತೊಳೆಯಿರಿ. ವಾರಕ್ಕೆ ಎರಡು ಬಾರಿ ಈ ರೀತಿ ಮಾಡಿದರೆ ವೈಟ್ ಹೆಡ್ಸ್ ನಿವಾರಣೆಯಾಗುತ್ತದೆ.