ಯಾವಾಗಲೂ ಯಂಗ್ ಆಗಿ ಕಾಣಲು ನಾವು ಸಾಕಷ್ಟು ಕಸರತ್ತು ಮಾಡುತ್ತೇವೆ. ಬ್ಯೂಟಿ ಟ್ರೀಟ್ಮೆಂಟ್ಸ್, ಸೌಂದರ್ಯ ವರ್ಧಕ ಉತ್ಪನ್ನಗಳ ಮೊರೆ ಹೋಗುತ್ತೇವೆ. ಆದರೆ ಮುಖದ ಮೇಲೆನ ಕಲೆಗಳು, ಮೊಡವೆಗಳು, ಸುಕ್ಕುಗಳಿಂದಾಗಿ ನಮ್ಮ ಪ್ರಯತ್ನ ಫಲ ಕೊಡುವುದೇ ಇಲ್ಲ.
ಅನೇಕರು ಮೊಡವೆ ನಿವಾರಣೆಗಾಗಿ ಎಲ್ಲಾ ರೀತಿಯ ರಾಸಾಯನಿಕ ಆಧಾರಿತ ಉತ್ಪನ್ನಗಳನ್ನು ಬಳಸುತ್ತಾರೆ, ಆದರೆ ಇದು ಚರ್ಮಕ್ಕೆ ಹಾನಿಯನ್ನುಂಟುಮಾಡುತ್ತದೆ. ಮುಖದಲ್ಲಿ ಮೂಡುವ ಮೊಡವೆಗಳಿಂದ ಮುಕ್ತಿ ಪಡೆಯಲು ಅಲೋವೆರಾ ಜೆಲ್ಬಹಳ ಪ್ರಯೋಜನಕಾರಿಯಾಗಿದೆ. ಆದರೆ ಅದನ್ನು ಸೂಕ್ತವಾಗಿ ಬಳಸುವುದು ಬಹಳ ಮುಖ್ಯ.
ಅಲೋವೆರಾ ಮತ್ತು ರೋಸ್ ವಾಟರ್– ಅಲೋವೆರಾ ಮತ್ತು ರೋಸ್ ವಾಟರ್ ಮಿಶ್ರಣ ಮುಖದ ಮೇಲಿನ ದದ್ದು, ತುರಿಕೆ ಮತ್ತು ಮೊಡವೆಗಳನ್ನು ನಿವಾರಿಸುತ್ತದೆ. ಇದು ಚರ್ಮದ ಅಲರ್ಜಿಯ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಈ ಮಿಶ್ರಣವನ್ನು ಕ್ಲೆನ್ಸರ್ ಆಗಿ ಕೂಡ ಬಳಸಬಹುದು.
ಅಲೋವೆರಾ ಮತ್ತು ಮೊಸರು– ಅಲೋವೆರಾದಂತೆ ಮೊಸರು ಕೂಡ ನಮ್ಮ ಮುಖದ ಸೌಂದರ್ಯವನ್ನು ದುಪ್ಪಟ್ಟು ಮಾಡಬಲ್ಲದು. ಅಲೋವೆರಾ ಜೆಲ್ ಹಾಗೂ ಮೊಸರನ್ನು ಮಿಶ್ರಣ ಮಾಡಿ ಆ ಮಾಸ್ಕ್ ಅನ್ನು ಬಳಸಬೇಕು. ಇದು ಮುಖದ ಹೊಳಪನ್ನು ಹೆಚ್ಚಿಸುತ್ತದೆ. ಪ್ರೋಬಯಾಟಿಕ್ಸ್ ಗುಣಲಕ್ಷಣಗಳು ಮೊಸರಿನಲ್ಲಿ ಕಂಡುಬರುತ್ತವೆ. ಇದು ಮೈಬಣ್ಣವನ್ನು ಸುಧಾರಿಸುತ್ತದೆ. ಮೊಸರಿನಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ರಾಶಸ್ ಅನ್ನು ಹೋಗಲಾಡಿಸುತ್ತವೆ.
ಅಲೋವೆರಾ ಮತ್ತು ಜೇನುತುಪ್ಪ – ಅಲೋವೆರಾ ಮತ್ತು ಜೇನುತುಪ್ಪದ ಕಾಂಬಿನೇಷನ್ ಕೂಡ ಮುಖಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. ಅಲೋವೆರಾ ಮತ್ತು ಜೇನುತುಪ್ಪದ ಮಿಶ್ರಣವನ್ನು ನಿಯಮಿತವಾಗಿ ಬಳಸುವುದರಿಂದ ಕಲೆಗಳು, ಸುಕ್ಕುಗಳು ಮತ್ತು ಶುಷ್ಕತೆ ನಿವಾರಣೆಯಾಗುತ್ತದೆ.