ಸುಂದರವಾಗಿ ಕಾಣಬೇಕು ಅನ್ನೋದು ಎಲ್ಲರ ಆಸೆ. ಆದ್ರೆ ಮುಖದ ಮೇಲೆ ಕಾಣಿಸಿಕೊಳ್ಳುವ ಕಪ್ಪು ಚುಕ್ಕೆಗಳು, ಕಲೆಗಳು ನಮ್ಮ ಸೌಂದರ್ಯವನ್ನೇ ಹಾಳು ಮಾಡಿಬಿಡುತ್ತವೆ. ಎಷ್ಟೇ ಸೌಂದರ್ಯ ಉತ್ಪನ್ನಗಳನ್ನು ಬಳಸಿದ್ರೂ ಈ ಕಲೆಗಳನ್ನು ಹೋಗಲಾಡಿಸುವುದು ಕಷ್ಟ. ಹಾಗಾಗಿ ಕೆಲವೊಂದು ಸುಲಭ ಮಾರ್ಗಗಳನ್ನು ಅಳವಡಿಸಿಕೊಳ್ಳಬೇಕು. ಮನೆಮದ್ದುಗಳ ಬಗ್ಗೆ ತಿಳಿದುಕೊಳ್ಳಬೇಕು.
ಬೆಳ್ಳುಳ್ಳಿ : ಸಾಮಾನ್ಯವಾಗಿ ಪ್ರತಿ ಅಡುಗೆ ಮನೆಯಲ್ಲೂ ಬೆಳ್ಳುಳ್ಳಿ ಇದ್ದೇ ಇರುತ್ತದೆ. ಈ ಬೆಳ್ಳುಳ್ಳಿ ನಿಮ್ಮ ಮುಖದ ಹೊಳಪನ್ನು ಹೆಚ್ಚಿಸುವ ಸಾಮರ್ಥ್ಯ ಹಿಂದಿದೆ. ಮುಖದ ಮೇಲೆ ಗೋಚರಿಸುವ ಕಪ್ಪು ಕಲೆಗಳ ಮೇಲೆ ಬೆಳ್ಳುಳ್ಳಿ ಬಳಸಿ.
ಸಿಪ್ಪೆ ಸುಲಿದ ಬೆಳ್ಳುಳ್ಳಿ ಮತ್ತು ಲವಂಗವನ್ನು ಪೇಸ್ಟ್ ಮಾಡಿಕೊಳ್ಳಿ. ಅದಕ್ಕೆ ಆಪಲ್ ಸೈಡರ್ ವಿನೆಗರ್ ಸೇರಿಸಿ. ಈ ಮಿಶ್ರಣವನ್ನು ಮಚ್ಚೆ ಅಥವಾ ನರಹುಲಿ ಇರುವ ಜಾಗಕ್ಕೆ ಹಚ್ಚಿ ಅರ್ಧ ಗಂಟೆ ಬಿಡಿ. ನಂತರ ಅದನ್ನು ಶುದ್ಧ ನೀರಿನಿಂದ ತೊಳೆಯಿರಿ. ಬರೀ ಬೆಳ್ಳುಳ್ಳಿ ಎಸಳುಗಳನ್ನು ಜಜ್ಜಿ ಮಜ್ಜೆಯ ಮೇಲೆ ಹಚ್ಚಿಕೊಳ್ಳಿ. 4-5 ಗಂಟೆಗಳ ಕಾಲ ಅದನ್ನು ಹಾಗೇ ಬಿಡಿ. ನಂತರ ಸ್ವಚ್ಛ ನೀರಿನಿಂದ ತೊಳೆದುಕೊಳ್ಳಿ. 3-4 ದಿನಗಳವರೆಗೆ ಹೀಗೆ ಮಾಡುವುದರಿಂದ ಆ ಮಚ್ಚೆ ಉದುರಿ ಹೋಗುತ್ತದೆ.