
ಅಡುಗೆ ಸೋಡಾವನ್ನು ಅಡುಗೆಗೆ ಹೆಚ್ಚಾಗಿ ಬಳಸುತ್ತಾರೆ. ಆದರೆ ಇದರಿಂದ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು. ಅದು ಹೇಗೆ ಎಂಬುದನ್ನು ತಿಳಿಯೋಣ.
½ ಚಮಚ ಅಡುಗೆ ಸೋಡಾವನ್ನು ನಿಮ್ಮ ಫೇಸ್ ವಾಶ್ ಗೆ ಮಿಕ್ಸ್ ಮಾಡಿ ಅದರಿಂದ ಮುಖ ತೊಳೆಯವುದರಿಂದ ಮುಖದಲ್ಲಿ ಕುಳಿತಿರುವ ಬ್ಯಾಕ್ಟೀರಿಯಾಗಳು ನಾಶವಾಗಿ ಮುಖ ಕ್ಲೀನ್ ಆಗುತ್ತದೆ. ಮೊಡವೆ, ಗುಳ್ಳೆಗಳು, ಅಲರ್ಜಿ ಸಮಸ್ಯೆ ದೂರವಾಗುತ್ತದೆ.
ಹಾಗೇ ಟೂತ್ ಪೇಸ್ಟ್ ಗೆ 1 ಚಿಟಿಕೆ ಅಡುಗೆ ಸೋಡಾ ಮಿಕ್ಸ್ ಮಾಡಿ ಹಲ್ಲುಜ್ಜಿ. ಇದರಿಂದ ಹಲ್ಲುಗಳು ಸ್ವಚ್ಚವಾಗುವುದಲ್ಲದೇ, ಹೊಳಪನ್ನು ಪಡೆಯುತ್ತದೆ. ಇದನ್ನು ವಾರಕ್ಕೊಮ್ಮೆ ಬಳಸಿ.
ಅಲ್ಲದೇ ಅಡುಗೆ ಸೋಡಾವನ್ನು ಶಾಂಪೂವಿಗೆ ಮಿಕ್ಸ್ ಮಾಡಿ ನೆತ್ತಿಗೆ ಹಚ್ಚುವುದರಿಂದ ಕೂದಲಿನ ಸಮಸ್ಯೆ ದೂರವಾಗುತ್ತದೆ. ಇದು ಉತ್ತಮ ಕಂಡೀಷನರ್ ರೀತಿಯಲ್ಲಿ ಕೆಲಸ ಮಾಡುತ್ತದೆ.