ಮುಖದ ಅಂದಕ್ಕೆ ಸೋಪ್, ಫೇಸ್ ವಾಶ್ ಗಳನ್ನು ಬಳಸುವ ಬದಲು ಮನೆಯಲ್ಲಿರುವ ವಸ್ತುಗಳನ್ನು ಬಳಸಿ ಮುಖ ತೊಳೆದರೆ ಮುಖದ ಕಾಂತಿ ಹೆಚ್ಚುತ್ತದೆ. ಮೊಡವೆ, ಕಲೆಗಳಿಂದ ಕೂಡ ದೂರವಾಗಬಹುದು.
ಈ ಪೌಡರ್ ಅನ್ನು ಮನೆಯಲ್ಲಿ ತಯಾರಿಸಿಕೊಂಡು ಮುಖ ತೊಳೆದೆರೆ ಮುಖದಲ್ಲಿನ ಕಲ್ಮಶ ದೂರವಾಗುವುದಲ್ಲದೇ ಗ್ಲೋ ಕೂಡ ನಿಮ್ಮದಾಗುತ್ತದೆ.
2 ಚಮಚ ಕಡಲೇ ಹಿಟ್ಟು, 2 ಚಮಚ ಮುಲ್ತಾನಿ ಮಿಟ್ಟಿ ,1 ಟೀ ಸ್ಪೂನ್ ಕಸ್ತೂರಿ ಅರಿಶಿನ. ಈ ಮಿಶ್ರಣಕ್ಕೆ 2 ಸ್ಪೂನ್ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಇದರಿಂದ ಮುಖ ತೊಳೆದರೆ ಮುಖದಲ್ಲಿನ ಕಲೆಗಳು ದೂರವಾಗುವುದಲ್ಲದೇ ಮುಖವೂ ಚೆಂದವಾಗುತ್ತದೆ. ಅರಿಶಿನ ಆಗದವರು ಕಡಲೆ ಹಿಟ್ಟು ಹಾಗೂ ಮುಲ್ತಾನಿ ಮಿಟ್ಟಿ ಎರಡನ್ನು ಮಾತ್ರ ಬಳಸಬಹುದು.
3 ದೊಡ್ಡ ಚಮಚ ಅಗಸೆ ಬೀಜವನ್ನು ಹುರಿದು ಪುಡಿಮಾಡಿ ಕೊಳ್ಳಿ, 3 ದೊಡ್ಡ ಚಮಚ ಉದ್ದಿನ ಬೇಳೆಯನ್ನು ಪುಡಿ ಮಾಡಿಕೊಳ್ಳಿ, ಪಿಪ್ಪಲಿ ಪುಡಿ 50 ಗ್ರಾಂ ಇವಿಷ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ ಒಂದು ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಕೊಳ್ಳಿ. ಸ್ನಾನ ಮಾಡುವಾಗ ಇದರ ಮಿಶ್ರಣಕ್ಕೆ ತುಸು ರೋಸ್ ವಾಟರ್ ಸೇರಿಸಿ ಮುಖ, ಮೈಗೆ ಹಚ್ಚಿಕೊಂಡು ಸ್ನಾನ ಮಾಡಿ.