ವೀಳ್ಯದೆಲೆ ಆರೋಗ್ಯಕ್ಕೆ ಒಳ್ಳೆಯದು. ಅನೇಕ ಕಡೆ ಪಾನ್ ರೂಪದಲ್ಲಿ ವೀಳ್ಯದೆಲೆಯನ್ನು ಸೇವನೆ ಮಾಡ್ತಾರೆ. ಈ ವೀಳ್ಯದೆಲೆಯನ್ನು ಪಾನ್ ರೂಪದಲ್ಲಿ ಸೇವನೆ ಮಾಡುವ ಜೊತೆಗೆ ಶುಭ ಕಾರ್ಯಗಳಲ್ಲಿ ದೇವರ ಮುಂದಿಡುತ್ತಾರೆ. ಆದ್ರೆ ವೀಳ್ಯದೆಲೆ ಅಷ್ಟಕ್ಕೆ ಸೀಮಿತವಲ್ಲ. ಚರ್ಮದ ಕಾಂತಿ ಹೆಚ್ಚಿಸುತ್ತದೆ ವೀಳ್ಯದೆಲೆ.
ವೀಳ್ಯದೆಲೆಯಲ್ಲಿರುವ ಆಂಟಿಆಕ್ಸಿಡೆಂಟ್ ಗಳು ಚರ್ಮದಲ್ಲಿರುವ ಸತ್ತ ಜೀವಕೋಶಗಳನ್ನು ತೆಗೆದು ಹಾಕುತ್ತವೆ. ಮುಖದ ಚರ್ಮ, ಕಾಂತಿ ಪಡೆಯಲು ನೆರವಾಗುತ್ತವೆ. ಐದು ವೀಳ್ಯದೆಲೆಯನ್ನು ತೆಗೆದುಕೊಳ್ಳಿ.
ಅದನ್ನು ಸ್ವಚ್ಛವಾಗಿ ತೊಳೆಯಿರಿ. ನಂತ್ರ ವೀಳ್ಯದೆಲೆಯನ್ನು ರುಬ್ಬಿ ಒಂದು ಟೀ ಚಮಚ ಜೇನು ತುಪ್ಪವನ್ನು ಬೆರೆಸಿ ಫೇಸ್ ಪ್ಯಾಕ್ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ. ವಾರದಲ್ಲಿ ಎರಡು ಬಾರಿಯಂತೆ 2 ತಿಂಗಳು ಮಾಡಿ. ಒಣಗಿದ ಚರ್ಮ ಮೃದುವಾಗಿ ಚರ್ಮ ಕಾಂತಿ ಪಡೆಯುತ್ತದೆ.
ಸ್ವಲ್ಪ ವೀಳ್ಯದೆಲೆಯನ್ನು ಒಂದು ಲೀಟರ್ ನೀರಿಗೆ ಹಾಕಿ ಕುದಿಸಿ. ಆ ನೀರಿನಲ್ಲಿ ಮುಖ ತೊಳೆದುಕೊಳ್ಳಿ. ವಾರಕ್ಕೆ ಒಮ್ಮೆ ವೀಳ್ಯದೆಲೆ ನೀರಿನಲ್ಲಿ ಮುಖ ತೊಳೆಯಿರಿ. ಇದ್ರಿಂದ ಮುಖ ಬೆಳ್ಳಗಾಗುತ್ತದೆ. ಆದ್ರೆ ಹೆಚ್ಚು ಬಾರಿ ಈ ನೀರಿನಲ್ಲಿ ಮುಖ ತೊಳೆದ್ರೆ ಚರ್ಮ ಒಣಗುವ ಅಪಾಯವಿರುತ್ತದೆ.
ಸುಟ್ಟ ಗಾಯಕ್ಕೂ ಹೇಳಿ ಮಾಡಿಸಿದ ಔಷಧಿ ವೀಳ್ಯದೆಲೆ. ವೀಳ್ಯದೆಲೆಯನ್ನು ಸರಿಯಾಗಿ ಸ್ವಚ್ಛಗೊಳಿಸಿ ಅದನ್ನು ರುಬ್ಬಿ ಸಾವಯವ ಜೇನುತುಪ್ಪ ಬೆರೆಸಿ ಸುಟ್ಟ ಜಾಗಕ್ಕೆ ಹಚ್ಚಿಕೊಳ್ಳಿ. ಇದ್ರಿಂದ ಸುಟ್ಟ ಉರಿ ಕಡಿಮೆಯಾಗಿ ಹಿತವೆನಿಸುತ್ತದೆ.
ಮೊಡವೆಯನ್ನು ವೀಳ್ಯದೆಲೆ ದೂರ ಮಾಡುತ್ತದೆ. ವೀಳ್ಯದೆಲೆಯನ್ನು ನೀರಿಗೆ ಹಾಕಿ ಕುದಿಸಿ. ನೀರಿನ ಬಣ್ಣ ಬದಲಾದ ತಕ್ಷಣ ಗ್ಯಾಸ್ ಬಂದ್ ಮಾಡಿ. ಈ ನೀರಿನಲ್ಲಿ ಮುಖ ತೊಳೆಯುವುದರಿಂದ ಮೊಡವೆ ಕಡಿಮೆಯಾಗುತ್ತದೆ.