alex Certify ಮುಖದ ಕಾಂತಿ ಇಮ್ಮಡಿಗೊಳಿಸಲು ಇಲ್ಲಿದೆ ಮನೆ ಮದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಖದ ಕಾಂತಿ ಇಮ್ಮಡಿಗೊಳಿಸಲು ಇಲ್ಲಿದೆ ಮನೆ ಮದ್ದು

ಮುಖದ ಸೌಂದರ್ಯಕ್ಕಾಗಿ ಮಹಿಳೆಯರು ಬ್ಯೂಟಿ ಪಾರ್ಲರ್ ಗಳಿಗೆ ಸಾವಿರಗಟ್ಟಲೆ ಹಣ ಸುರಿಯುತ್ತಾರೆ. ಕೆಮಿಕಲ್ ಬಳಸಿ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಲು ಹೋಗ್ತಾರೆ. ಆದ್ರೆ ಅದು ಕೆಲವರಿಗೆ ಅಲರ್ಜಿಯಾಗಿ ತೊಂದರೆ ಅನುಭವಿಸಿದ ಉದಾಹರಣೆಗಳು ನಮ್ಮ ಮುಂದಿವೆ.

ಹೀಗಾಗಿ ಅಡಿಗೆ ಮನೆಯಲ್ಲೇ ಇರುವ ಪದಾರ್ಥಗಳನ್ನು ಬಳಸಿ ಮಹಿಳೆಯರು ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಬಹದು. ಇದ್ರಿಂದ ಹಣ, ಆರೋಗ್ಯ, ಸಮಯ, ಎಲ್ಲಾ ಉಳಿತಾಯವಾಗುತ್ತೆ. ಪಾರ್ಲರ್ ಗಳಲ್ಲಿ ಬಳಸುವ ಸ್ಕ್ರಬ್ ಗಳ ಬದಲು, ಮನೆಯಲ್ಲೇ ನೀವು ಸ್ಕ್ರಬ್ ತಯಾರಿಸಿ.

ಮನೆಯಲ್ಲೇ ಇರುವ ಕಡಲೆ ಬೀಜವನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿ. ಈ ಕಡಲೆ ಬೀಜದ ಪುಡಿಗೆ ಸ್ವಲ್ಪ ಮೊಸರು ಸೇರಿಸಿ ಮುಖಕ್ಕೆ ನಯವಾಗಿ ತಿಕ್ಕಿ. ಸ್ವಲ್ಪ ಹೊತ್ತು ಬಿಟ್ಟು ಉಗುರು ಬೆಚ್ಚಗಿನ ನೀರಲ್ಲಿ ಮುಖ ತೊಳೆಯಿರಿ. ಆಗ ನಿಮ್ಮ ಚರ್ಮದ ಕಾಂತಿ ಹೊಳೆಯುತ್ತದೆ. ಹೀಗೆ ಇದನ್ನು ವಾರಕ್ಕೆರೆಡು ಬಾರಿ ಮಾಡಿದ್ರೆ, ನಿಮ್ಮ ಮುಖದ ಸೌಂದರ್ಯ ಮತ್ತಷ್ಟು ಹೆಚ್ಚಲಿದೆ.

ಇದಲ್ಲದೆ ಟೊಮೆಟೋ ಹಣ್ಣನ್ನೂ ಕೂಡಾ ಸ್ಕ್ರಬರ್ ಆಗಿ ಬಳಸಬಹುದು. ಕಡಲೆ ಹಿಟ್ಟು, ಅದಕ್ಕೆ ಸ್ವಲ್ಪ ಸಕ್ಕರೆ ಹಾಕಿ. ಟೊಮೆಟೋವನ್ನು ಎರಡು ಹೋಳು ಮಾಡಿ, ಆ ಹೋಳುಗಳಲ್ಲಿ ಕಡಲೆ ಹಿಟ್ಟು, ಸಕ್ಕರೆ ಮಿಶ್ರಣವನ್ನು ಸೇರಿಸಿ ಮುಖಕ್ಕೆ ಹಚ್ಚಿದ್ರೆ ಕಾಂತಿಯುತ ತ್ವಚೆ ನಿಮ್ಮದಾಗುತ್ತೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...